ಕರ್ನಾಟಕ

ದತ್ತು, ಸಂತೋಷ್ ಹೆಗಡೆ, ಶಿವರಾಜ್ ಪಾಟೀಲ್‌ಗೆ ಗೌರವ ಡಾಕ್ಟರೇಟ್

Pinterest LinkedIn Tumblr

dattu

ಧಾರವಾಡ,ಡಿ.17-ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್, ಸಂತೋಷ್ ಹೆಗಡೆ  ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದ್ವಿತೀಯ ವಾರ್ಷಿಕ ಘಟಿಕೋತ್ಸವದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ನಗರದ  ಸತ್ತೂರಿನ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಈ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.  ಕಾನೂನು ಸಂಸದೀಯ ವ್ಯವಹಾರ ಮತ್ತು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಘಟಿಕೋತ್ಸವ ಉದ್ಘಾಟಿಸಿದರು. ಕಾನೂನು ವಿ.ವಿ. ಕುಲಪತಿ ಟಿ.ಆರ್.ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು.

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಮುಖ್ಯ ಭಾಷಣಕಾರರಾಗಿ  ಆಗಮಿಸಿ ಕಾನೂನು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.  ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ ಹಾಗೂ ಸಂತೋಷ್ ಹೆಗಡೆ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

ಘಟಿಕೋತ್ಸವದಲ್ಲಿ 1788 ಕಾನೂನು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಾನಿ ಪಾಲ್ಕಿ ವಾಲಾ ಮೆಮೋರಿಯಲ್  ಟ್ರಸ್ಟ್ ಮುಂಬೈ ವತಿಯಿಂದ ಕಾನೂನು ಪದವಿಯಲ್ಲಿ ಪ್ರಥಮ ರ್ಯಾಂ ಕ್ ಗಳಿಸಿದ 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.

ಚಿನ್ನದ ಪದಕ ವಿಜೇತರು:
ಸಹನಾ ಪೈ(ಮೂರನೇ ವರ್ಷದ ಎಲ್‌ಎಲ್‌ಬಿ- ಪ್ರಥಮ) ಸಾಧನಾ, ಸಮೀಕ್ಷಾ, ಮೋಹಂತವೆ(5ನೇ ವರ್ಷದ ಎಲ್‌ಎಲ್‌ಬಿ, ಪ್ರಥಮ), ಮೇಘನಾ, ಬಾಲಕಟ್ಟಿ(5ನೇ ವರ್ಷದ ಬಿಬಿಎ, ಎಲ್‌ಎಲ್‌ಬಿ ಪ್ರಥಮ), ಅನುಪಶಾ ಕಲಕೇರಿ( 5ನೇ ವರ್ಷದ ಬಿಬಿಎ ಎಲ್‌ಎಲ್‌ಬಿ ಪ್ರಥಮ), ನೂತನ ಪಾಟೀಲ(ಎಲ್‌ಎಲ್‌ಎಂ 2ನೇ ವರ್ಷ ಪ್ರಥಮ), ಇಂದಲಗಿ ನಯಂಬಾಸ್(ಎಲ್‌ಎಲ್‌ಎಂ, ಪ್ರಥಮ) ಕಾರ್ತಿಕ ಆನಂದ ಎಲ್‌ಎಲ್‌ಎಂ ಪ್ರಥಮ) ಶ್ರೀ ಕೃಷ್ಣ ಭಾರದ್ವಾಜ್(ಎಲ್‌ಎಲ್‌ಎಂ ಪ್ರಥಮ) ಹಾಗೂ  ರಿತಿಕ್ ಎಲ್.ಆರ್. ಪ್ರಥಮ ರ್ಯಾಂ ಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

Write A Comment