ಕರ್ನಾಟಕ

ಅನೈತಿಕ ಸಂಬಂಧ : ಪಾಳು ಮನೆಯೊಂದರಲ್ಲಿ ಕತ್ತು ಕೊಯ್ದು ಜೋಡಿ ಕೊಲೆ

Pinterest LinkedIn Tumblr

ani

ಬೆಂಗಳೂರು, ಡಿ.18-ಪಾಳು ಮನೆಯೊಂದರಲ್ಲಿ ಕತ್ತು ಕೊಯ್ದು ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಂ.ಎಸ್.ಪಾಳ್ಯ ಬಳಿಯ ಆಶ್ರಯ ಕಾಲೋನಿ ನಿವಾಸಿಗಳಾದ ಮಹಿಳೆ  ಪಾಪಚ್ಚಿ (40) ಮತ್ತು ಗಣೇಶ್  ಕೊಲೆಯಾಗಿರುವವರು. ಪಾಪಚ್ಚಿಯ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿರುವ  ಪಾಳು ಮನೆಯಲ್ಲಿ ನಿನ್ನೆ ಜೋಡಿ ಕೊಲೆ ನಡೆದಿದ್ದು, ತಡರಾತ್ರಿ ಬೆಳಕಿಗೆ ಬಂದಿದೆ. ಫೆನಾಯಿಲ್ ಮಾರುವ ಪಾಪಚ್ಚಿ ಹಾಗೂ ಗಣೇಶ್ ಇಬ್ಬರೂ ಪರಿಚಯಸ್ಥರಾಗಿದ್ದು, ಇವರ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

ಲಾರಿಗೆ ಮರಳು ತುಂಬುವ  ಕೂಲಿ ಕೆಲಸ ಮಾಡುವ ಪಾಪಚ್ಚಿಯ ಗಂಡ  ರಾಜು ನಿನ್ನೆ ರಾತ್ರಿ ಮನೆಗೆ ಬಂದಿದ್ದು, ಬಹಳ ಹೊತ್ತಾದರೂ ಪತ್ನಿ ಮನೆಗೆ ಬಾರದಿದ್ದರಿಂದ  ಹುಡುಕಾಡಿದಾಗ ಪಾಳು ಮನೆಯಲ್ಲಿ ಇಬ್ಬರು ಕೊಲೆಯಾಗಿರುವುದು ಕಂಡು ಬಂದಿದೆ.

ಪಾಪಚ್ಚಿಯ ಮಗ ಮಾಣಿಕ್ಯನೂ ಪಾಳು ಮನೆಯಲ್ಲಿ ತಾಯಿ ಕೊಲೆಯಾಗಿರುವುದನ್ನು  ನೋಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಡಿಸಿಪಿ ಟಿ.ಆರ್.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲೇ ರಕ್ತಸಿಕ್ತವಾಗಿರುವ ಚಾಕು ಪತ್ತೆಯಾಗಿದೆ.   ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Write A Comment