ಕರ್ನಾಟಕ

ಮೊಬೈಲ್ ನಲ್ಲಿ ಈ ಬಟನ್ ಒತ್ತಿದರೆ ಸಾಕು ಮಹಿಳೆಯರು ಸೇಫ್…!

Pinterest LinkedIn Tumblr

mob

ನವದೆಹಲಿ, ಡಿ.19: ಇನ್ನು ಮುಂದೆ ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ, ದೌರ್ಜನ್ಯ ನಡೆಸಲು ಮುಂದಾದೀರಿ ಜೋಕೆ..! ಏಕೆಂದರೆ, ಕೇಂದ್ರ ಸರ್ಕಾರ ಇನ್ನು ಮುಂದೆ ಮಹಿಳೆಯರ ರಕ್ಷಣೆಗಾಗಿ ವಿನೂತನ ಯೋಜನೆಯೊಂದನ್ನು ಜಾರಿ ಮಾಡಲು ಮುಂದಾಗಿದೆ.

ಮಹಿಳೆಯರ ಸುರಕ್ಷತೆಗಾಗಿ ಇನ್ನು ಮೊಬೈಲ್‌ನಲ್ಲಿ ನೂತನ ಬಟನ್ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ವಿಶೇಷ ಬಟನ್ ಒತ್ತಿದರೆ ಸಾಕು, ಇದು ಅಪಾಯದ ಸಂಕೇತವನ್ನು ಸೂಚಿಸುತ್ತದೆ. ಅಂದರೆ ಮಹಿಳೆ ಅಪಾಯದಲ್ಲಿದ್ದಾಳೆಂಬ ಸಂದೇಶವನ್ನು ರವಾನಿಸುತ್ತದೆ. ಆಂಬುಲೆನ್ಸ್ ರೀತಿ ಶಬ್ದ ಬರುವ ಈ ಬಟನ್‌ಅನ್ನು ಮೊಬೈಲ್‌ನಲ್ಲಿ ಅಳವಡಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ದೂರ ಸಂಪರ್ಕ ಇಲಾಖೆಗೆ ಮನವಿ ಮಾಡಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ದೂರ ಸಂಪರ್ಕ ಇಲಾಖೆ ಇನ್ನು ನೂತನವಾಗಿ ಮಾರುಕಟ್ಟೆಗೆ ಬರಲಿರುವ ಮೊಬೈಲ್‌ನಲ್ಲಿ ಈ ಪ್ರತ್ಯೇಕ ಬಟನ್ ಅಳವಡಿಸಲು ಹೊಸ ತಂತ್ರಜ್ಞಾನ ರೂಪಿಸಿದ್ದಾರೆ.

ಮೊಬೈಲ್‌ನಲ್ಲಿ ಸಂಪರ್ಕ ಪಡೆಯಲು ನಾವು ಹೇಗೆ ಸಂಖ್ಯೆಯ ಬಟನ್ ಒತ್ತುತ್ತೇವೊ ಅದೇ ರೀತಿ ಮಹಿಳೆಯರು ಈ ವಿಶೇಷ ಬಟನ್ ಒತ್ತಿದರೆ ಸಾಕು ರಕ್ಷಣೆಗೆ ಪೊಲೀಸ್ ಇಲ್ಲವೆ ನಾಗರಿಕರು ದಾವಿಸಬಹುದು. ಇನ್ನು ಆರು ತಿಂಗಳೊಳಗೆ ನಾವು ಮೊಬೈಲ್‌ನಲ್ಲಿ ಬುಲೆಟ್ ಬಟನ್ ಅಳವಡಿಸಿ ಮಾರುಕಟ್ಟೆಗೆ ತರಲಿದ್ದೇವೆ. ಇದಕ್ಕೆ ಯಾವುದೇ ರೀತಿಯ ವಿಶೇಷ ದರ ಇರುವುದಿಲ್ಲ ಎಂದು ಮನೇಕಾ ಗಾಂಧಿ ತಿಳಿಸಿದ್ದಾರೆ.

ಮಹಿಳೆಯು ಏಕಾಂಗಿಯಾಗಿ ಹೊರಹೋಗುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಇಲ್ಲವೆ ದಾರಿಹೋಕರು ಆಕೆಯನ್ನು ಚುಡಾಯಿಸುವುದು, ಹಲ್ಲೆ ನಡೆಸುವುದು ಇಲ್ಲವೆ ಅತ್ಯಾಚಾರ ನಡೆಸಲು ಮುಂದಾದರೆ ರಕ್ಷಣೆಗಾಗಿ ಈ ಬಟನ್ ಒತ್ತಿದರೆ ಸಾಕು. ತಕ್ಷಣವೇ ಇದರ ಸಂಕೇತ ಪೊಲೀಸ್ ಠಾಣೆಗೆ ರವಾನೆಯಾಗುತ್ತದೆ. ಅಲ್ಲದೆ ಇದು ಹೆಚ್ಚಿನ ಶಬ್ದ ಪ್ರಸಾರವಾಗುವಂತೆ ಅಳವಡಿಕೆ ಮಾಡಲಾಗಿದೆ. ಶಬ್ದ ಪ್ರಸಾರವಾಗುತ್ತಿದ್ದಂತೆ ನನಗೆ ಸಹಾಯ ಮಾಡಿ ಎಂದು ಅಂಗಲಾಚುತ್ತಾಳೆ. ಜತೆಗೆ ಮಹಿಳೆ ಯಾವ ಸ್ಥಳದಲ್ಲಿದ್ದಾಳೆಂಬುದನ್ನು ಸಹ ತಿಳಿದುಕೊಳ್ಳಬಹುದು. ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಈ ಉಪಾಯ ಕಂಡುಕೊಳ್ಳಲಾಗಿದೆ.

Write A Comment