ಕರ್ನಾಟಕ

ವಿದ್ಯಾರ್ಥಿ ತಲೆಗೆ ನಾಟಿದ 4 ಇಂಚಿನ ಮೊಳೆ, ಹಾಸನದಲ್ಲಿ ಘಟನೆ!

Pinterest LinkedIn Tumblr

Hasana-webಹಾಸನ: ಹೊಳೆನರಸೀಪುರ ತಾಲೂಕು ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಸಂಜೆ ನಲಿ-ಕಲಿ ಕೊಠಡಿಯಲ್ಲಿ ಗೋಡೆಗೆ ನೇತು ಹಾಕಿದ್ದ ತನ್ನ ಪ್ರಗತಿ ವರದಿ ಎಳೆಯಲು ಯತ್ನಿಸಿದ ಬಾಲಕನೊಬ್ಬನ ತಲೆಗೆ ಆಕಸ್ಮಿಕವಾಗಿ ಮೊಳೆ ಹೊಕ್ಕಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಒಂದನೇ ತರಗತಿ ವಿದ್ಯಾರ್ಥಿ ಸೋಮೇಶ್ (6) ತಲೆಗೆ ನಾಲ್ಕು ಇಂಚಿನ ಮೊಳೆ ಹೊಕ್ಕಿದರೂ ಅಪಾಯದಿಂದ ಪಾರಾಗಿರುವ ವಿದ್ಯಾರ್ಥಿ. ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮೊಳೆ ಹೊರ ತೆಗೆಯಲಾಗಿದೆ. ಬಾಲಕ ಚೇತರಿಸಿಕೊಂಡಿದ್ದಾನೆ.

ಘಟನೆ ನಡೆದಿದ್ದು ಹೇಗೆ?

ಶುಕ್ರವಾರ ಸಂಜೆ 4.30ರ ಸುಮಾರಿನಲ್ಲಿ ನಲಿ-ಕಲಿ ಚುಟವಟಿಕೆ ನಡೆಯುತ್ತಿದ್ದಾಗ ಸೋಮೇಶ್, ಶಿಕ್ಷಕರು ನೇತು ಹಾಕಿದ್ದ ತಮ್ಮ ಪ್ರಗತಿ ವರದಿಯನ್ನು ಕೀಳಲು ಜಿಗಿದಿದ್ದಾನೆ. ಆಗ ಆತ ಬಳಸಿದ ಬಲದ ರಭಸಕ್ಕೆ ಪ್ರಗತಿ ವರದಿಯೊಂದಿಗೆ ಪಠ್ಯ ಚಟುವಟಿಕೆ ಕಾರ್ಡ್​ಗಳನ್ನು ನೇತು ಹಾಕಲೆಂದು ಗೋಡೆಗೆ ಹೊಡೆದಿರುವ ಮೊಳೆಯೂ ಕಿತ್ತು ಬಂದಿದೆ. ಅದು ನೇರವಾಗಿ ಆತನ ತಲೆ ಬುರುಡೆಯ ಬಲಭಾಗಕ್ಕೆ ನಾಟಿತು. ತಕ್ಷಣ ಆತನನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ನಗರದ ಖಾಸಗಿ ನರ್ಸಿಂಗ್ ಹೋಂಗೆ ಕರೆತರಲಾಯಿತು. ಅಲ್ಲಿ ತಲೆ ಬುರುಡೆ ಸ್ಕ್ಯಾನಿಂಗ್ ನಡೆಸಿದಾಗ ಮೇಲ್ಬಾಗಕ್ಕೆ ಮಾತ್ರ ಮೊಳೆ ನಾಟಿರುವುದು ಸ್ಪಷ್ಟವಾಯಿತು. ತಕ್ಷಣ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮೊಳೆ ಹೊರ ತೆಗೆದರು.

Write A Comment