ಕರ್ನಾಟಕ

ಪೊಲೀಸರ ಸೋಗಿನಲ್ಲಿ ಟೆಕ್ಕಿಗಳ ದರೋಡೆ

Pinterest LinkedIn Tumblr

21

ಬೆಂಗಳೂರು, ಡಿ.20: ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನೈಸ್ ರಸ್ತೆಯಲ್ಲಿ ಟೆಕ್ಕಿಗಳಿಬ್ಬರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡಿದ ಪ್ರಕರಣ ಕಳೆದ ರಾತ್ರಿ ನಡೆದಿದೆ.

ನಗರದ ನಾಗರಬಾವಿ ನಿವಾಸಿ ವರುಣ್ ತನ್ನ ಸ್ನೇಹಿತೆಯ ಜೊತೆ ಮೈಸೂರು ರಸ್ತೆಯ ಹೋಟೆಲ್ ಒಂದರಲ್ಲಿ ಊಟ ಮುಗಿಸಿ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಪೊಲೀಸ್ ಸಮವಸ್ತ್ರ ಧರಿಸಿ ಸ್ವಿಫ್ಟ್ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ವರುಣ್ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಪೆÇಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸುಳ್ಳು ದೂರು ದಾಖಲಿಸಲಾಗುವುದು ಎಂದು ಹೆದರಿಸಿ ಹಲ್ಲೆ ನಡೆಸಿ 60 ಸಾವಿರ ರೂ. ಹಣ ಎಟಿಎಂನಿಂದ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ.

ದುರಂತವೆಂದರೆ ತಲಘಟ್ಟಪುರ ಪೆÇಲೀಸ್ ಠಾಣೆ ಎದುರಿನಲ್ಲೇ ಇರುವ ಎಸ್.ಬಿ.ಐ ಹಾಗು ಕೆನರಾ ಬ್ಯಾಂಕ್ ಎಟಿಎಂಗಳಲ್ಲಿಯೇ ದುಷ್ಕರ್ಮಿಗಳು ವರುಣ್ ಅವರಿಂದ ಹಣ ಡ್ರಾ ಮಾಡಿಸಿಕೊಂಡಿದ್ದಾರೆ. ಆ ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ವರುಣ್ ತಲಘಟ್ಟಪುರ ಪೆÇಲೀಸರಿಗೆ ದೂರು ನೀಡಿದ್ದು ಪೆÇಲೀಸರು ನೈಸ್ ರಸ್ತೆ ಹಾಗೂ ಎಟಿಎಂಗಳಲ್ಲಿನ ಸಿಸಿಟಿ ದೃಶ್ಯಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment