ಕರ್ನಾಟಕ

ಚುಡಾಯಿಸಿದ ಮದ್ಯ ವ್ಯಸನಿಯನ್ನು ಥಳಿಸಿದ ಯುವತಿ

Pinterest LinkedIn Tumblr

beaten

ಧಾರವಾಡ: ಚುಡಾಯಿಸಿದ ಮದ್ಯ ವ್ಯಸನಿಯನ್ನು ಯುವತಿಯೇ ಥಳಿಸಿದ ಘಟನೆ ಇಲ್ಲಿನ ಹಳೇ ಬಸ್‌ ನಿಲ್ದಾಣದ ಬಳಿ ಭಾನುವಾರ ನಡೆದಿದೆ.

ಮಾರುಕಟ್ಟೆಯಿಂದ ಮರಳಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಯುವತಿಯನ್ನು ಹಿಂಬಾಲಿಸಿ ಬಂದ ಆತ ಕಣ್ಣು ಸನ್ನೆ ಮಾಡಿದ್ದೂ ಅಲ್ಲದೇ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಳಾದ ಆ ಯುವತಿ ಆತನನ್ನು ನಡುರಸ್ತೆಯಲ್ಲೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಆಕೆ ಈ ಸಂಬಂಧ ಪ್ರಕರಣ ದಾಖಲಿಸಿಲ್ಲ.

ಅಲ್ಲಿದ್ದ ಸಾರ್ವಜನಿಕರು ಆ ಯುವತಿಯ ಧೈರ್ಯ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ‘ಹೆಣ್ಣು ಮಕ್ಕಳನ್ನು ಚುಡಾಯಿಸುವವರಿಗೆ ಹೆಣ್ಣು ಮಕ್ಕಳೇ ಈ ರೀತಿ ಉತ್ತರ ನೀಡಬೇಕು’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
(ಪ್ರಜಾವಾಣಿ)

Write A Comment