ಕರ್ನಾಟಕ

ಪೊಲೀಸ್ ವಸತಿ ಗೃಹದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಹೋದರರ ಸಾವು

Pinterest LinkedIn Tumblr

kr

ಕೆ.ಆರ್.ಪೇಟೆ, ಡಿ.21: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೊಂಡು ಕಾರ್ಮಿಕರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ. ಮೈಸೂರಿನ ರಾಜೀವನಗರ ನಿವಾಸಿ ಶಬ್ಬೀರ್‌ಬೇಗ್(40) ಮತ್ತು ಜಬ್ಬಾರ್‌ಬೇಗ್(38) ಮೃತಪಟ್ಟ ದುರ್ದೈವಿಗಳು.

ಘಟನೆಯ ವಿವರ: ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ತಾಲೂಕು ಕಚೇರಿಯ ಬಳಿ 1.5ಕೋಟಿ ರೂ ವೆಚ್ಚದಲ್ಲಿ ಪೊಲೀಸ್ ವಸತಿ ಗೃಹವನ್ನು ಪೊಲೀಸ್ ಗೃಹ ನಿರ್ಮಿಣ ಮಂಡಳಿಯ ವತಿಯಿಂದ ನಿರ್ಮಿಸಲಾಗುತ್ತಿದೆ. ಈ ಕಟ್ಟಡದ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕಟ್ಟಡದ ಕಾಂಕ್ರೀಟ್‌ನ ಕ್ಯೂರಿಂಗ್‌ಗಾಗಿ ಒಳ ಆವರಣದಲ್ಲೆಲ್ಲಾ ನೀರನ್ನು ನಿಲ್ಲಿಸಿದ್ದರೆನ್ನಲಾಗಿದೆ.

ಮೃತ ಸಹೋದರರು ಸದರಿ ಕಟ್ಟಡದ ಪ್ಲಂಬಿಂಗ್ ಕಾಮಗಾರಿಯನ್ನು ಮುಖ್ಯ ಗುತ್ತಿಗೆದಾರರಿಂದ ಉಪಗುತ್ತಿಗೆ ಪಡೆದುಕೊಂಡು ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಎಂದಿನಂತೆ ಅವರು ಪ್ಲಂಬಿಂಗ್ ಕೆಲಸಕ್ಕೆ ಕಟ್ಟಡ ಒಳಭಾಗಕ್ಕೆ ಹೋಗಿದ್ದರು.

ಕಟ್ಟಡದ ಕಾಮಗಾರಿ ಕೆಲಸ ಹಗಲು ರಾತ್ರಿ ನಡೆಯುತ್ತಿದ್ದ ಕಾರಣ ವಿದ್ಯುತ್ ಸಂಪರ್ಕವನ್ನು ಇಲಾಖೆಯ ಅನುಮತಿಯೊಂದಿಗೆ ಪಡೆಯಲಾಗಿತ್ತು. ಅಲ್ಲದೆ ಕಟ್ಟಡ ಕ್ಯೂರಿಂಗ್ ಮಾಡುವವರು ಕಟ್ಟಡಕ್ಕೆ ನೀರು ಹರಿಯಬಿಟ್ಟಿದ್ದರು ಎನ್ನಲಾಗಿದೆ. ಇದರ ಪರಿಣಾಮ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಕಟ್ಟಡದ ಒಳಗೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಶಬ್ಬೀರ್‌ಬೇಗ್ ಮತ್ತು ಜಬ್ಬಾರ್‌ಬೇಗ್ ಅವರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.

Write A Comment