ಕರ್ನಾಟಕ

ದರ್ಶನ್ ‘ವಿರಾಟ್’ ಟೀಸರ್ ಬಿಡುಗಡೆ

Pinterest LinkedIn Tumblr

viraatಬೆಂಗಳೂರು: ಮೂರು ವರ್ಷದಿಂದ ಚಿತ್ರೀಕರಣಗೊಳ್ಳುತ್ತಿರುವ ದರ್ಶನ್ ಅಭಿನಯದ ‘ವಿರಾಟ್’ ಚಲನಚಿತ್ರದ ಅಧಿಕೃತ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು ವೈರಲ್ ಆಗುವತ್ತ ಮುನ್ನುಗ್ಗಿದೆ. “ವಿರಾಟ್ ಪಾತ್ರ ನಿರ್ವಹಿಸಿರುವ ನಟನ ಮೊದಲ ನೋಟವನ್ನು ಟೀಸರ್ ನೀಡುತ್ತದೆ” ಎನ್ನುತ್ತಾರೆ ನಿರ್ದೇಶಕ ಎಚ್ ವಾಸು. “ವಿರಾಟ್ ಕಮರ್ಶಿಯಲ್ ಸಿನೆಮಾಗೆ ಬೇಕಾದ ಎಲ್ಲ ಅಂಶಗಳನ್ನೂ ಹೊಂದಿದೆ” ಎನ್ನುತ್ತಾರೆ.

ದರ್ಶನ್ ಎದುರು ಮೂರು ನಟಿಯರು ವಿದಿಶಾ ಶ್ರೀವಾಸ್ತವ, ಇಶಾ ಚಾವ್ಲಾ ಮತ್ತು ಚೈತ್ರ ಚಂದ್ರನಾಥ್ ಅವರು ನಟಿಸಿದ್ದಾರೆ.

ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಡಬ್ಬಿಂಗ್ ಹಂತದಲ್ಲಿದೆ. ಸಿನೆಮಾ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ನಿರ್ದೇಶಕ.

ಸಿ ಕಲ್ಯಾಣ್ ನಿರ್ಮಾಣದ ‘ವಿರಾಟ್’ ಸಿನೆಮಾಗೆ ಎಂ ಎಸ್ ರಮೇಶ್ ಸ್ಕ್ರೀನ್ ಪ್ಲೇ ಬರೆದಿದ್ದು, ವಿ ಹರಿಕೃಷ್ಣ ಅವರ ಸಂಗೀತವಿದೆ. ಸುಹಾಸಿನಿ ಮಣಿರತ್ನಂ, ಸುಮಲತಾ, ರವಿಶಂಕರ್, ಶ್ರೀನಿವಾಸ್ ಮೂರ್ತಿ ಸಹನಟರು.

Write A Comment