ಕರ್ನಾಟಕ

ಕಸ ಎಸೆಯುವವರಿಗೆ ಉಡುಗೊರೆ

Pinterest LinkedIn Tumblr

CITY_152ಬೆಂಗಳೂರು: ಸಾಣೆಗುರವನಹಳ್ಳಿಯ (ಬಸವೇಶ್ವರ ನಗರ) ಸರ್ಕಾರಿ ಶಾಲೆ ಮಕ್ಕಳು ತ್ಯಾಜ್ಯ ಮತ್ತು ನವೀಕರಿಸಿದ ಕಾಗದದಲ್ಲಿ ಹೊಸ ವರ್ಷದ ಶುಭಾಶಯ ಪತ್ರಗಳನ್ನು ತಯಾರಿಸಿ ರಸ್ತೆಯಲ್ಲಿ ಕಸ ಎಸೆಯುವವರಿಗೆ ಉಡುಗೊರೆ ನೀಡಿದ್ದಾರೆ.

ಕಳಿಂಗ ಇನ್ಸ್​ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ಯೂನಿವರ್ಸಿಟಿ ಮತ್ತು ಕಳಿಂಗ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್(ಕೆಐಎಸ್​ಎಸ್) ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರ ಮಾರ್ಗದರ್ಶನದಲ್ಲಿ ರೂಪಿತಗೊಂಡಿರುವ ತಂಡ ಶಾಲೆಗಳಿಗೆ ‘ಆರ್ಟ್ ಆಫ್ ಗಿವಿಂಗ್’ ಎಂಬ ಯೋಜನೆಯಲ್ಲಿ ಮಕ್ಕಳಿಗೆ ಈ ಉಡುಗೊರೆ ತಯಾರಿಸುವ ಕುರಿತು ತರಬೇತಿ ನೀಡಿದ್ದಾರೆ.

ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ಎಸೆದ ತ್ಯಾಜ್ಯವನ್ನು ತೆಗೆದುಕೊಂಡು ಅದಕ್ಕೆ ಉಡುಗೊರೆ ರೂಪ ನೀಡಿದ್ದಾರೆ. ಕೆಐಎಸ್​ಎಸ್ ತಂಡದ ಸದಸ್ಯೆ ಜಯಲಕ್ಷ್ಮೀ ಈ ಬಗ್ಗೆ ಮಾಹಿತಿ ನೀಡಿ, ಇಂದು ವಿದ್ಯಾರ್ಥಿಗಳಿಗೆ ಪಠದ ಜತೆಗೆ ಕೌಶಲ್ಯದ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಹಾಗಾಗಿ ಕೆಐಎಸ್​ಎಸ್ ಅಧೀನದಲ್ಲಿ ನಮ್ಮ ತಂಡ ಶಾಲೆಗಳಿಗೆ ಭೇಟಿ ಕೌಶಲ್ಯ ಭರಿತ ಶಿಕ್ಷಣ ನೀಡುತ್ತಿದೆ. ಇದು ಮುದೊಂದು ದಿನ ಉದ್ಯೋಗದ ದಾರಿಯೂ ಆಗಬಹುದು ಎಂದರು.

Write A Comment