ಕರ್ನಾಟಕ

ಪತ್ನಿ ಕಪ್ಪೆಂದು ಬೆಂಕಿ ಹಚ್ಚಿದ್ದ ಪತಿಗೆ 5 ವರ್ಷ ಶಿಕ್ಷೆ

Pinterest LinkedIn Tumblr

CITY_29

ಕೀರ್ತಿನಾರಾಯಣ ಸಿ.

ಬೆಂಗಳೂರು: ಪತ್ನಿ ಕಪ್ಪಗಿದ್ದಾಳೆ ಎಂಬ ಕಾರಣಕ್ಕೆ ಪ್ರತಿನಿತ್ಯ ಹೀಯಾಳಿಸಿ ಮದುವೆಯಾದ ಐದೇ ತಿಂಗಳಿಗೆ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಪತಿಗೆ 46ನೇ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಕಠಿಣ ಸಜೆ ವಿಧಿಸಿದೆ.

ಚಿಕ್ಕಬಾಣಾವರ ಅಬ್ಬಿಗೆರೆ ಗ್ರಾಮದ ಅಂಬರೀಶ್(30) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಗಂಗಮ್ಮನಗುಡಿ ಠಾಣೆ ಪೊಲೀಸರು ಆರೋಪಿಯ ವಿರುದ್ಧ ಸಾಕ್ಷ್ಯಾಧಾರ ಸಮೇತ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಅಂಬರೀಶ್ ಜತೆ 2008ರ ಮಾ.9ರಂದು ಶಿಲ್ಪಾಗೆ ಮದುವೆಯಾಗಿತ್ತು. 45 ಗ್ರಾಂ ಚಿನ್ನಾಭರಣ ಹಾಗೂ ಹಣ ವರದಕ್ಷಿಣೆಯಾಗಿ ಕೊಡಲಾಗಿತ್ತು. ಆದರೆ, ಮದá-ವೆಯ ಬಳಿಕ ಪ್ರತಿನಿತ್ಯ ಅಂಬರೀ್ ಶಿಲ್ಪಾಳನ್ನು, ಕಪ್ಪು ಬಣ್ಣ ಹೊಂದಿರುವ ನಿನಗೆ ನನ್ನನ್ನು ಮದುವೆಯಾಗುವ ಯೋಗ್ಯತೆ ಇಲ್ಲ ಎಂದು ಹೀಯಾಳಿಸುತ್ತಿದ್ದ. ಶಿಲ್ಪಾಳನ್ನು ಮನೆಯಿಂದ ಓಡಿಸಿ ಮತ್ತೊಂದು ವಿವಾಹವಾಗುವುದು ಅಂಬರೀಶ್ ಹಾಗೂ ಆತನ ಪಾಲಕರ ಉದ್ದೇಶವಾಗಿತ್ತು. ಆದರೆ, ಎಷ್ಟೇ ಕಿರುಕುಳ ಕೊಟ್ಟರೂ ಶಿಲ್ಪಾ ಗಂಡನ ಮನೆ ತೊರೆಯದಿದ್ದಾಗ, ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಹೊರಜಗತ್ತಿಗೆ ಬಿಂಬಿಸಲು ಅಂಬರೀಶ್ ಒಳಸಂಚು ರೂಪಿಸಿದ್ದ.

ಬಳಿಕ 2008ರ ಆ.19ರಂದು ಮಧ್ಯರಾತ್ರಿ ಶಿಲ್ಪಾ ಮಲಗಿದ್ದಾಗ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಆಕೆಯ ಚೀರಾಟ ಕೇಳಿಸಿ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡು, ಬೆಂಕಿ ನಂದಿಸಿ ಶಿಲ್ಪಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶಿಲ್ಪಾ ತಂದೆ ನಾರಾಯಣಪ್ಪ ಕೊಟ್ಟ ದೂರಿನ ಮೇರೆಗೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಲ್ಪಾ ಹೇಳಿಕೆ ದಾಖಲಿಸಿಕೊಂಡಿದ್ದರು. ಭೂಗತನಾಗಿದ್ದ ಆರೋಪಿ ಅಂಬರೀಶ್​ನನ್ನು ಪತ್ತೆಹಚ್ಚಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ವರದಕ್ಷಿಣೆ ಕಿರುಕುಳ ನೀಡಿ ಹತ್ಯೆಗೆ ಯತ್ನಿಸಿದ ಆರೋಪ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್​ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಸುರೇಶ್ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ಎಂ.ಆರ್.ಬನ್ನಿಹಟ್ಟಿ ವಾದ ಮಂಡಿಸಿದರು.

ಆತ್ಮಹತ್ಯೆ ಯತ್ನವೆಂದೇ ಬಿಂಬಿಸುವ ಪ್ರಯತ್ನ

ಪೊಲೀಸರು ವಿಚಾರಿಸಿದಾಗ ಅಂಬರೀಶ್ ಹಾಗೂ ಆತನ ಕುಟುಂಬ ಶಿಲ್ಪಾ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳೆಂದೇ ವಾದಿಸಿದ್ದರು. ಆದರೆ, ಶಿಲ್ಪಾ ಅದೃಷ್ಟವಶಾತ್ ಬದುಕಿ ಹೇಳಿಕೆ ನೀಡಿದ ಬಳಿಕ ಸತ್ಯ ಬಯಲಾಗಿತ್ತು. ಗಂಡನ ಕೃತ್ಯಕ್ಕೆ ಆತನ ತಂದೆ, ತಾಯಿ, ಸೋದರಿ ಮತ್ತು ಸೋದರ ಕೂಡ ಬೆಂಬಲ ನೀಡಿದ್ದರೆಂದು ಶಿಲ್ಪಾ ಹೇಳಿದ್ದರೂ, ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಅವರೆಲ್ಲಾ ಖುಲಾಸೆಯಾಗಿದ್ದಾರೆ.

Write A Comment