ಕರ್ನಾಟಕ

ವೇಶ್ಯಾವಾಟಿಕೆ ನಡೆಸುತ್ತಿದ್ದ 11 ಮಂದಿ ಬಂಧನ; ಸಿಸಿಬಿ ಪೊಲೀಸರಿಂದ ನಡೆದ ಕಾರ್ಯಾಚರಣೆ

Pinterest LinkedIn Tumblr

prost

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿ ನಗದನ್ನು ವಶಪಡಿಸಿ ಕೊಂಡಿದ್ದಾರೆ.

ಮೈಸೂರು ಮೂಲದ ಮಂಜು (26), ಮಂಡ್ಯ ಮೂಲದ ಮಹೇಶ್ (24), ಧಾರವಾಡ ಮೂಲದ ಅಬ್ದುಲ್ ರೆಹಮಾನ್(32), ಹಾಸನ ಮೂಲದ ನವೀನ್‍ಕುಮಾರ್(26), ಬೆಂಗಳೂರಿನ ಜಯನಗರದ ಶಂಕರ್(50), ಟಿ.ದಾಸರಹಳ್ಳಿಯ ರಮೇಶ್(24), ಕೊಟ್ಟಿಗೆಪಾಳ್ಯದ ಅಶೋಕ್‍ಕುಮಾರ್ (28), ಸುಮ್ಮನಹಳ್ಳಿಯ ಸೋಮಶೇಖರ್ (22), ಜೆಜೆ ನಗರದ ಸಾಧೀಕ್(25), ಆರ್‍ಪಿಸಿ ಲೇಔಟ್‍ನ ಅಭಿಷೇಕ್ (24), ಗಣಪತಿ ನಗರದ ರಾಘವೇಂದ್ರ ನಾಯಕ್ (28) ಬಂಧಿತರು.

ಮೈಸೂರು ಮುಖ್ಯರಸ್ತೆಯ ಎನ್.ಟಿ.ಪೇಟೆಯಲ್ಲಿರುವ ಆರ್‍ಆರ್‍ಆರ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು,

ಡಿ.27ರಂದು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ರು.23,480 ನಗದು ಹಾಗೂ ಇತರೆ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿರುವ ಆರೋಪಿಗಳಾದ ಬಾಲಾಜಿ, ಪವನ್, ಹೇಮಂತ, ಕೃಷ್ಣ ಮತ್ತು ಮಂಜು ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರ್‍ಆರ್‍ಆರ್ ಲಾಡ್ಜ್ ಕಟ್ಟಡವನ್ನು ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದಲೇ ನಿರ್ಮಾಣ ಮಾಡಲಾಗಿದೆ. ದಂಧೆಯ ಸೂತ್ರಧಾರ ಬಾಲಾಜಿ, ಹುಬ್ಬಳ್ಳಿ ಮತ್ತು ಮೈಸೂರು ಮೂಲದ ಹುಡುಗಿಯರಿಗೆ ಹಣದ ಆಮಿಷ ತೋರಿಸಿ ದಂಧೆಯಲ್ಲಿ ತೊಡಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment