ಕರ್ನಾಟಕ

ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಹುಂಡಿಯಲ್ಲಿ 1.11 ಕೋಟಿ ರೂ. ಸಂಗ್ರಹ

Pinterest LinkedIn Tumblr

maleಕೊಳ್ಳೇಗಾಲ, ಡಿ.30- ತಾಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ 1,11,33,184ರೂ., 33 ಗ್ರಾಂ ಚಿನ್ನ, 850 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ. ದೇವಾಸ್ಥಾನದ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಡಿ.ಭಾರತಿರವರ ಅಧ್ಯಕ್ಷತೆಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ರಾಜ್ಯದ ಅತಿ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ದೇವಾಲಯ 2ನೆ ಸ್ಥಾನದಲ್ಲಿದ್ದು, ದೇವಾಲಯದ ಹುಂಡಿಯ ಒಂದು ತಿಂಗಳ ಸಂಗ್ರಹ ಇದಾಗಿದೆ. ನಿನ್ನೆ ಬೆಳಿಗ್ಗೆ 7ಗಂಟೆಯಿಂದ ರಾತ್ರಿ 8ರ ವರೆಗೆ ಎಣಿಕೆ ಕಾರ್ಯ ನಡೆಯಿತು.

ಸಾಲೂರು ಬೃಹನ್ಮಠದ ಗುರುಸ್ವಾಮಿಗಳು, ಪ್ರಾಧಿಕಾರದ ಉಪಕಾರ್ಯದರ್ಶಿ ಎಚ್.ರಾಮಪ್ಪ, ಬಿ.ಮಾದರಾಜು, ಜಿಲ್ಲಾಧಿಕಾರಿ ಕbಚೆರಿ ಪ್ರ.ದ.ಸಹಾಯಕ ಮೋಹನ್‌ಕುಮಾರ್, ಸ್ಥಳಿಯ ವೃತ್ತ ನಿರೀಕ್ಷಕ ಮರಿಸಿದ್ದಶೆಟ್ಟಿ ಹಾಜರಿದ್ದರು. ಎಣಿಕೆಯ ಕಾರ್ಯದಲ್ಲಿ ದೇವಾಲಯದ ಸಿಬ್ಬಂದಿ ಎಸ್‌ಬಿಎಂ ಸ್ಥಳಿಯ ಶಾಖೆ ವ್ಯವಸ್ಥಾಪಕ ಗುರುರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Write A Comment