ರಾಯಚೂರು: ದೇವದುರ್ಗ ಪಟ್ಟಣದ ಮಾಳಗಡ್ಡಿ ಪ್ರದೇಶದಲ್ಲಿನ ಸರಕಾರಿ ಹೈಸ್ಕೂಲ್ಗೆ ಕಳೆದ ರಾತ್ರಿ ಬೆಂಕಿಯಿಟ್ಟ ಘಟನೆ ಘಟಿಸಿದೆ.ಬೆಂಕಿಯಿಡುವ ಮೊದಲು ಕಿಡಿಗೇಡಿಗಳು ಶಾಲೆಯಲ್ಲಿನ ಆಹಾರ ಧಾನ್ಯ ಬಳಸಿ ಅಡುಗೆ ತಯಾರಿಸಿ ಊಟ ಮಾಡಿದ್ದಾರೆ.
ಈ ರೀತಿಯ ಘಟನೆ ನಡೆದದ್ದು ಇದೇ ಮೊದಲಲ್ಲ. ಕಳೆದ ಎರಡು ಬಾರಿ ಇದೇ ರೀತಿಯ ಘಟನೆ ನಡೆದಾಗ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತಾಳಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವದುರ್ಗದ ಹೊರವಲಯದಲ್ಲಿರುವ ಮಾಳಗಡ್ಡಿ ಪ್ರದೇಶದ ಅಲೆಮಾರಿ ಜನಾಂಗದ ಯುವಕರಿಂದ ಈ ಕೃತ್ಯ ನಡೆದಿರುವ ಬಗ್ಗೆ ಸ್ಥಳೀಯರಿಂದ ಶಂಕೆ ವ್ಯಕ್ತಪಡಿಸಿದ್ದಾರೆ.