ಕರ್ನಾಟಕ

ಹಾಲಿನ ದರ ಏರಿಕೆಗೆ ಸಿದ್ದರಾಮಯ್ಯ ಸಮರ್ಥನೆ

Pinterest LinkedIn Tumblr

Siddaramaiah

ಮೈಸೂರು: ಈ ತಿಂಗಳ ದಿನಾಂಕ 5 ರಿಂದ ಜಾರಿಗೆ ಬರುವಂತೆ ಹಾಲು ದರ ಹೆಚ್ಚಳ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡರು.

ಅವರು ಇಂದು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಪಶು ಆಹಾರ ದರಗಳಲ್ಲಿ ಹೆಚ್ಚಳವಾಗಿದೆ. ಕೆ ಎಂ ಎಫ್ ನೌಕರರ ವೇತನ ಹೆಚ್ಚಳವಾಗಿದೆ. ಕೆ ಎಂ ಎಫ್ ಸಂಸ್ಥೆಯು ಕಳೆದ 2 ವರ್ಷಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಬೇಡಿಕೆ ಮಂಡಿಸಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರವನ್ನು ಪ್ರತಿ ಲೀಟರಿಗೆ 4 ರೂ ಹೆಚ್ಚಳ ಮಾಡಲಾಗಿದೆ ಎಂದು ಹಾಲಿನ ದರ ಹೆಚ್ಚು ಮಾಡಿರುವ ಪ್ರಶ್ನೆಗೆ ಉತ್ತರಿಸಿದರು. ಈ ರೀತಿ ಹೆಚ್ಚಳ ಮಾಡಿರುವ 4 ರೂ ಗಳಲ್ಲಿ 3 ರೂ ಗಳನ್ನು ರೈತರಿಗೂ, ಉಳಿದ 1 ರೂ ಅನ್ನು ನಿರ್ವಹಣ ವೆಚ್ಚಕ್ಕೆ ಬಳಸಿಕೊಳ್ಳಲಾಗುವುದು ಎಂದರು. ಈ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಲಿದೆ. ಈ ರೀತಿ ದರ ಹೆಚ್ಚು ಮಾಡಿರುವುದರಲ್ಲಿ ಯಾವುದೇ ರಾಜಕೀಯ ಹುನ್ನಾರವಿಲ್ಲ. ಹಾಗೂ ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿಯೂ ಹಾಲಿನ ದರ ಹೆಚ್ಚಳ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಕಡಿಮೆ ಸ್ಥಾನಗಳನ್ನು ಗಳಿಸಿದೆ ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಚುನಾವಣೆಯಲ್ಲಿ ನಮ್ಮ ಪಕ್ಷವು ಕಡಿಮೆ ಸ್ಥಾನ ಗಳಿಸಿದೆ. ಬೆಳಗಾವಿ, ಕೋಲಾರ, ಚಿಕ್ಕಮಂಗಳೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸುವರೆಂಬ ನಿರೂಕ್ಷೆ ಇಟ್ಟುಕೊಳ್ಳಲಾಗಿತ್ತು, ಆದರೆ ಅಲ್ಲಿ ನಮ್ಮ ವಿರುದ್ಧ ಜನತೆ ತೀರ್ಪು ನೀಡುವುದರಿಂದ ಇದರ ಬಗ್ಗೆ ಸಂಭದಿಸಿದವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಸಿದ್ದರಾಮಯ್ಯ ಉತ್ತರಿಸಿದರು.

ಹಾಸನದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದವರು ಯಾವುದೇ ಹುನ್ನಾರ ಮಾಡಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಯಾವಾಗಲು ಆಶಾವಾದಿಯಾಗಿರಲಿ. ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದು ನಮಗೆ ತಿಳಿದಿದೆ. ಮುಂದಿನ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳು ಅದನ್ನು ನಿರೂಪಿಸಲಿವೆ ಎಂದರು. ಮುಂಬರುವ ಜಿ.ಪಂ ಚುನಾವಣೆಯಲ್ಲಿ 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Write A Comment