ಕರ್ನಾಟಕ

ಅಪಘಾತ: 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

Pinterest LinkedIn Tumblr

Deadly accident

ಕಲಬುರಗಿ, ಜ. 3: ಬೈಕ್ ಮತ್ತು ಮಿನಿ ಗೂಡ್ಸ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಹೊರವಲಯದ ಸೊಲಾಪೂರ ಬೈಪಾಸ್ ರಸ್ತೆಯಲ್ಲಿ ರಾತ್ರಿ ಸುಮಾರು 1:30 ರ ಸುಮಾರಿಗೆ ನಡೆದಿದೆ.

ಅಪಘಾತದಲ್ಲಿ ಸಿಂದಗಿ ತಾಲೂಕಿನ ಸಾಲಿಮಠ, ಕೋಲ್ಕತ್ತಾ ಮೂಲದ ಅನಿಂದ, ಬೆಂಗಳೂರ ಮೂಲದ ಅಡವೇಶ ಎಂಬ ವಿದ್ಯಾರ್ಥಿಗಳು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಜಯಪುರ ನಗರ ಸಂಚಾರಿ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment