ಕರ್ನಾಟಕ

ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ

Pinterest LinkedIn Tumblr

helmet

ಬೆಂಗಳೂರು: ದ್ವಿಚಕ್ರ ವಾಹನಗಳ ಹಿಂಬದಿ ಸವಾರರೂ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಡಿ. 31ರಂದೇ ಅಧಿಸೂಚನೆ ಹೊರಡಿಸಿದೆ. ಆದರೆ ಅದರ ಪ್ರತಿ ಭಾನುವಾರ ಲಭ್ಯವಾಗಿದೆ.

‘ಈ ನಿಯಮ ರಾಜ್ಯದ ಎಲ್ಲ ಪಾಲಿಕೆಗಳ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ. ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದಿರುವುದು ಕಂಡುಬಂದರೆ, ₹100 ದಂಡ ವಿಧಿಸಲಾಗುತ್ತದೆ’ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

‘ಅಂಗಡಿಗಳವರು ಸಾಕಷ್ಟು ಹೆಲ್ಮೆಟ್ ದಾಸ್ತಾನು ಮಾಡಬೇಕು, ಖರೀದಿಸಲು ಸಾರ್ವಜನಿಕರಿಗೆ ತುಸು ಕಾಲ ಬೇಕು. ಹೀಗಾಗಿ ಜನವರಿ 12–13 ರಿಂದ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

Write A Comment