ಕರ್ನಾಟಕ

ಅಂತಾರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Pinterest LinkedIn Tumblr

modi-yoga-conferance

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ಭಾನುವಾರದಿಂದ ಆರಂಭವಾದ 21 ನೇ ಅಂತರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಯೋಗ ಸಮ್ಮೇಳನದಲ್ಲಿ ಪವಿತ್ರ ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಮೊದಲು ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು. “ನಾನು ಇಲ್ಲಿ ಅತಿಥಿಯಾಗಿ ಬಂದಿಲ್ಲ. ಪ್ರಧಾನಿಯಾಗುವ ಮೊದಲು ನಾನು ಇಲ್ಲಿಗೆ ಬಂದಿದ್ದೆ. ಆಗ ಲಕ್ಷ್ಮಿ ಅಮ್ಮ ಅವರ ಪ್ರೀತಿ ಸಿಗುತ್ತಿತ್ತು. ಲಕ್ಷ್ಮಿ ಅಮ್ಮ ಅವರ ನಿಧನದ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಲಕ್ಷ್ಮಿಯಮ್ಮ ಸ್ಮಾರಕ ಆಸ್ಪತ್ರೆ ಶಿಲಾನ್ಯಾಸದ ವೇಳೆ ನನಗೆ ಸಂತೋಷ ಮತ್ತು ದುಃಖ ಎರಡೂ ಆಗುತ್ತಿದೆ ಎಂದರು.

192 ದೇಶಗಳಿಂದ ಯೋಗ ದಿನಕ್ಕೆ ಬೆಂಬಲ ದೊರೆತಿತ್ತು. ಮಾನಸಿಕ ಆರೋಗ್ಯ, ಬಿಪಿ, ಮಧುಮೇಹಕ್ಕೆ ಯೋಗ ಅತ್ಯವಶ್ಯಕ. ವಿಶ್ವಕ್ಕೆ ಈಗ ಯೋಗದ ಮಹತ್ವ ಅರ್ಥವಾಗುತ್ತಿದೆ. ಪ್ರತಿಯೊಂದು ಸಮಸ್ಯೆಗೂ ಯೋಗದ ರೂಪದಲ್ಲಿ ಪರಿಹಾರ ದೊರೆತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.

Write A Comment