ಕರ್ನಾಟಕ

ಇಂದು ಮೇಲ್ಮನೆ ನೂತನ ಸದಸ್ಯರ ಪ್ರಮಾಣವಚನ

Pinterest LinkedIn Tumblr

melಬೆಂಗಳೂರು, ಜ.5-ರಾಜ್ಯ ವಿಧಾನ ಪರಿಷತ್‌ನ 24 ಮಂದಿ ಸದಸ್ಯರು ಇಂದು ನಿವೃತ್ತಿ ಹೊಂದುತ್ತಿದ್ದು, ಹೊಸದಾಗಿ ಆಯ್ಕೆಯಾಗಿರುವ 25 ಸದಸ್ಯರ ಪ್ರಮಾಣವಚನ ನಾಳೆ ಬೆಳಗ್ಗೆ ನಡೆಯಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ನಾಳೆ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ.

ನೂತನ ಸದಸ್ಯರಿಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ನ ಹನ್ನೆರಡು ಮಂದಿ, ಬಿಜೆಪಿಯ ಏಳು, ಜೆಡಿಎಸ್‌ನ ನಾಲ್ವರು ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇಂದು ನಿವೃತ್ತರಾದರು.

Write A Comment