ಕರ್ನಾಟಕ

ನೈಜೀರಿಯಾದ ಎಚ್‌ಐವಿ ರೋಗಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

Pinterest LinkedIn Tumblr

hiv

ಬೆಂಗಳೂರು, ಜ.6- ನೈಜೀರಿಯಾದಎಚ್‌ಐವಿ ಪಾಸಿಟಿವ್ ಉದ್ಯಮಿ ಓಜಿ ಅವರಿಗೆ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಮಣಿಪಾಲ್ ಆಸ್ಪತ್ರೆ ನಡೆಸಿದೆ. ಮುವತ್ತೇಳು ವರ್ಷ ವಯಸ್ಸಿನ ಈ ಉದ್ಯಮಿಗೆ 6 ವರ್ಷಗಳ ಹಿಂದೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದ್ದು, ಸತತವಾಗಿ ರೆಟ್ರೋ ವೈರಲ್ ಚಿಕಿತ್ಸೆಗೆ ಒಳಗಾಗಿದ್ದರು.ಅವರಿಗೆ ತೀವ್ರ ಮೂತ್ರಪಿಂಡ ಹಾನಿಯಾಗಿದ್ದು , ಕಳೆದ ನವೆಂಬರ್‌ನಿಂದ ಹೀಮೋ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಓಜಿ ಅವರು ಉತ್ತಮ ಬದುಕಿನ ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದರು. ಅದೃಷ್ಟವಶಾತ್ ಅವರಿಗೆ ಮಣಿಪಾಲ್‌ಆಸ್ಪತ್ರೆ ಶಿಫಾರಸು ಮಾಡಲಾಗಿತ್ತು. ಅಲ್ಲಿ ಅವರ ಆರೋಗ್ಯ ಸ್ಥಿತಿಯನ್ನು ಬಹು ವಿಶೇಷತೆಯ ತಂಡದಿಂದ ಮಲ್ಯೀಕರಿಸಲಾಗಿತ್ತು. ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಗಿತ್ತು.

ರೋಗಿಯ ಸೋದರನನ್ನು ದಾನಿಯೆಂದು ಗುರುತಿಸಲಾಗಿತ್ತು. ಕಳೆದ ತಿಂಗಳು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.ಕಸಿ ನಂತರಅವರ ಚೇತರಿಕೆ ತೃಪ್ತಿಕರವಾಗಿತ್ತು. ಅಳವಡಿಸಿದ ಅಂಗ ಸಾಮಾನ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸಿತ್ತು. ಸೋಂಕು ಹರಡುವುದನ್ನು ತಡೆಯಲು ರೋಗಿಯ ಆರೈಕೆಯಲ್ಲಿ ವಿಶ್ವವ್ಯಾಪಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮಣಿಪಾಲ್ ಆಸ್ಪತ್ರೆಯ ಚೇರ್ಮವನ್ ಡಾ.ಸುದರ್ಶನ್ ಬಲ್ಲಾಳ್, ಎಚ್‌ಐವಿ ಸೋಂಕಿನ ರೋಗಿಗಳ ಆರೈಕೆಯನ್ನು ಎಚ್ಚರಿಕೆಯಿಂದ ಮಾಡಲು ಅನುಭವಿ ವಿಶೇಷ ತಜ್ಞರ ಅಗತ್ಯವಿರುತ್ತದೆ. ಎಚ್‌ಐವಿ ಸೋಂಕು ಹೆಚ್ಚಾಗುವುದನ್ನು ತಡೆಯುವುದರ ಜೊತೆಗೆ ಅವರ ದೇಹದಾನವಾಗಿ ಪಡೆದ ಅಂಗವನ್ನು ತಿರಸ್ಕರಿಸುವುದನ್ನು ತಡೆಯುವುದರ ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.

ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಮೂತ್ರಪಿಂಡ ರೋಗತಜ್ಞ ಡಾ.ರೋಹನ್ ಮಾತನಾಡಿ, ಎಚ್‌ಐವಿ ರೋಗಿಗಳನ್ನು ಈ ಹಿಂದೆ ಮೂತ್ರಪಿಂಡ ಕಸಿ ಕಾರ್ಯಕ್ಕೆ ಪರಿಗಣಿಸಲಾಗುತ್ತಿ ರಲಿಲ್ಲ. ಆದರೆ ಇತ್ತೀಚೆಗೆ ಉತ್ತಮ ರೆಟ್ರೋ ವೈರಲ್‌ಚಿಕಿತ್ಸೆಯ ನಂತರ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು, ಇತರರೊಂದಿಗೆ ಹೋಲಿಸಬಹುದಾದ ಫಲಿತಾಂಶಗಳನ್ನು ಹೊಂದಿರುವುದಕ್ಕೆ ಸೂಕ್ತ ಅಂಕಿ ಅಂಶಗಳಿವೆ. ವೈದ್ಯಕೀಯವಾಗಿ ಸದೃಢದೇಹ ಹೊಂದಿರುವವರಾಗಿದ್ದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ಎಚ್‌ಐವಿ ಸೋಂಕಿನ ರೋಗಿಗಳಿಗೂ ಮುಂದುವರಿಯಲು ಮೂತ್ರಪಿಂಡ ಕಸಿ ಅತ್ಯುತ್ತಮ ಮಾರ್ಗ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ರೋಗಿ ಓಜಿ ಮಾತನಾಡಿ, ಮೂತ್ರಪಿಂಡ ಕಸಿಗೆ ಯಶಸ್ವಿಯಾಗಿ ಒಳಗಾಗಿರುವುದಕ್ಕೆ ನನಗೆ ರೋಮಾಂಚನವಾಗಿದೆ. ಎಚ್‌ಐವಿ ರೋಗಿಗಳನ್ನು ಸಾಮಾನ್ಯವಾಗಿ ಬಹಿಷ್ಕಾರದ ದೃಷ್ಟಿಯಿಂದ ನೋಡಲಾಗುತ್ತದೆ. ಮಣಿಪಾಲ್‌ತಂಡದ ವೈದ್ಯರು ನೀಡಿದಬೆಂಬಲ ಮತ್ತು ಪ್ರೋತ್ಸಾಹಗಳಿಂದ ನನ್ನ ಆತಂಕಗಳು ಅಂತ್ಯವಾದವು. ನನ್ನ ಪ್ರಕರಣದಲ್ಲಿ ತೋರಿದ ತೀವ್ರ ಬದ್ಧತೆ ಮತ್ತು ಪ್ರೋತ್ಸಾಹಗಳಿಂದ ನನಗೆ ಹೊಸ ಜೀವನದ ಭರವಸೆ ಸಿಕ್ಕಿದೆ. ನಾನು ಆರೋಗ್ಯವಾಗಿದ್ದಂತೆ ಅನಿಸುತ್ತಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Write A Comment