ಕರ್ನಾಟಕ

ಮಲೆನಾಡ ಗಾಂಧಿ ಮರಳಿ ಮಣ್ಣಿಗೆ : ಗೋವಿಂದೇಗೌಡರಿಗೆ ಅಂತಿಮ ನಮನ

Pinterest LinkedIn Tumblr

cm

ಚಿಕ್ಕಮಗಳೂರು: ನಿನ್ನೆ ನಿಧನರಾದ ಮಲೆನಾಡಿನ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಜಿ. ಗೋವಿಂದೇಗೌಡ ಅವರ ಪಾರ್ಥಿವ ಶರೀರ ಅಂತ್ಯಕ್ರಿಯೆ ಕೊಪ್ಪ ಪಟ್ಟಣದ ಹೊರವಲಯಲ್ಲಿಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಿತು.

ನೆರೆದಿದ್ದ ಸಹಸ್ರಾರು ಅಭಿಮಾನಿಗಳು, ಶಿಕ್ಷಕರು ಹಾಗೂ ಬೆಂಬಲಿಗರ ಅಶ್ರು ತರ್ಪಣದ ನಡುವೆ ಕೊಪ್ಪ ಹೊರವಲಯದ ಮಣಿಪುರ ಎಸ್ಟೇಟ್‌ನಲ್ಲಿ ಗೋವಿಂದೇಗೌಡರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಮಧ್ಯಾಹ್ನ ನೆರವೇರಿತು.

90 ವರ್ಷದ ಗೋವಿಂದೇಗೌಡ ಅವರು ತೀವ್ರ ಅನಾರೋಗ್ಯದಿಂದ ನಿನ್ನೆ ಕೊನೆಯುಸಿರೆಳದಿದ್ದರು.

ಗಣ್ಯರ ಅಂತಿಮ ದರ್ಶನ
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಕಿಮ್ಮನೆ ರತ್ನಾಕರ, ಟಿ.ಬಿ. ಜಯಚಂದ್ರ ಮಹದೇವಪ್ರಸಾದ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಹಲವಾರು ಗಣ್ಯರು ಇಂದು ಕೊಪ್ಪಕ್ಕೆ ಭೇಟಿ ನೀಡಿ ಮಾಜಿ ಸಚಿವ ಗೋವಿಂದೇಗೌಡರಿಗೆ ಅಂತಿಮ ನಮನ ಸಲ್ಲಿಸಿದರು.
ಗೋವಿಂದೇಗೌಡರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಇದಕ್ಕೂ ಮುನ್ನ ಗೋವಿಂದೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಗೋವಿಂದೇಗೌಡರು ಪತ್ನಿ ಶಾಂತಾ, ಪುತ್ರ ಜಿ.ಹೆಚ್. ವೆಂಕಟೇಶ್ ಹಾಗೂ ಐವರು ಪುತ್ರಿಯರನ್ನು ಬಿಟ್ಟಗಲಿದ್ದಾರೆ.

Write A Comment