ಕರ್ನಾಟಕ

ಲಕ್ಷಾಂತರ ರು. ವಂಚಿಸಿ ಚೀಟಿ ಹಣದೊಂದಿಗೆ ಪರಾರಿಯಾಗಿದ್ದ ಮಹಿಳೆ ಸೆರೆ

Pinterest LinkedIn Tumblr

Money_

ಬೆಂಗಳೂರು: ಚೀಟಿ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಪರಾರಿಯಾಗಿದ್ದ ಮಹಿಳೆಯೊಬ್ಬರನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪ್ರಮಿಳಾ (37) ಬಂಧಿತ ಆರೋಪಿ. ಗಂಗಾವತಿ ಮೂಲದ ಈಕೆ ಕೆಲ ವರ್ಷ ಗಳಿಂದ ನಗರದ ಮೂಡಲಪಾಳ್ಯದಲ್ಲಿ ವಾಸವಿದ್ದರು. ಈ ವೇಳೆ ನೆರೆಹೊರೆಯ ನಿವಾಸಿಗಳಿಂದ ಚೀಟಿ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಸಂಗ್ರಹಿಸಿದ್ದರು.

ಇತ್ತೀಚಗೆ ಚೀಟಿದಾರರು ಹಣ ಕೇಳದರೆ ಏನಾದರೂ ಕಾರಣ ಹೇಳಿ ದಿನ ದೂಡುತ್ತಿದ್ದರು. ಹೀಗೆ ಒಂದು ಹಂತದಲ್ಲಿ ಚೀಟಿದಾರರಿಂದ ಒತ್ತಡ ಹೆಚ್ಚಾದಾಗ ಇದ್ದಕ್ಕಿದ್ದ ಹಾಗೆ ಮನೆ ಖಾಲಿ ಮಾಡಿಕೊಂಡು ತೆರಳಿದ್ದರು. ಹಣ ನೀಡಿ ಮೋಸ ಹೋದ ಚೀಟಿದಾರರು ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಮೀಳಾ ಪತಿ ಮಂಜುನಾಥ್ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಕುರಿತು ಆರೋಪಿ ಪತಿಗೆ ತಿಳಿ ಹೇಳಿದ್ದರು. ಇದಕ್ಕೆ ಪತ್ನಿ ಮೇಲೆ ಮುನಿಸಿಕೊಂಡ ಮಂಜುನಾಥ್ 2014ರಲ್ಲಿ ಯಾವುದೋ ಕಾರಣಕ್ಕೆ ಮಹಿಳೆಯ ಮಗುವನ್ನು ಕೊಲೆ ಮಾಡಿದ್ದ. ಈ ಸಂಬಂಧ ನಗರದ ಸೆಷನ್ಸ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಹಾಗಾಗಿ ಪತಿ ಜತೆಗೆ ಪ್ರಮಿಳಾ ಕೂಡ ಸಾಕ್ಷಿ ಹೇಳಲು ನ್ಯಾಯಾಲಕ್ಕೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಲ್ಲಿಗೆ ತೆರಳಿ ಆಕೆಯನ್ನು ಬಂಧಿಸಿದ್ದಾರೆ.

Write A Comment