ಕರ್ನಾಟಕ

ವಿಧಾನಸೌಧ;ಅಧಿಕಾರಿಗಳಿಗೆ ಕಾದು, ಕಾದು ಸುಸ್ತಾದ ಸಂಸದರು! ಸಭೆಯೇ ರದ್ದು

Pinterest LinkedIn Tumblr

VBK-ARVIND_JADHAV_504216e

ಬೆಂಗಳೂರು: ವಿಧಾನಸೌಧದಲ್ಲಿ ಸಂಸದರ ನಿಧಿ ಬಳಕೆ ಮತ್ತು ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕಾಗಿದ್ದು, ಅಧಿಕಾರಿಗಳಿಗಾಗಿ ಕಾದು, ಕಾದು ಸುಸ್ತಾದ ಸಂಸದರು ಅಸಮಾಧಾನಗೊಂಡು ಸಭೆಯನ್ನೇ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಶುಕ್ರವಾರ ನಡೆದಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಸಂಸದ ಮಲ್ಲಿಕಾರ್ಜುನ ಖರ್ಗೆ, ಪ್ರಕಾಶ್ ಹುಕ್ಕೇರಿ, ಮುನಿಯಪ್ಪ, ಲೋಕಸಭೆ ಉಪಾಧ್ಯಕ್ಷ ತಂಬಿದೊರೈ ಸೇರಿದಂತೆ ವಿವಿಧ ರಾಜ್ಯದ ಸಂಸದರ ನಿಯೋಗ ಇಂದು ವಿಧಾನಸಭೆಗೆ ಆಗಮಿಸಿತ್ತು. ಸಂಸದರ ನಿಧಿ ಬಳಕೆ ಕುರಿತು ನಡೆಯಬೇಕಿದ್ದ ಸಭೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಗಾಗಿ ಸುಮಾರು 1ಗಂಟೆಗೂ ಅಧಿಕ ಕಾಲ ಸಂಸದರ ಕಾದು ಕುಳಿತಿದ್ದರು. ಜಾದವ್ ಗಾಗಿ ಕಾದು, ಕಾದು ಸುಸ್ತಾಗಿ ಅಸಮಾಧಾನಗೊಂಡ ಸಂಸದರು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಅವರು ಸಂಸದರ ಮನವೊಲಿಕೆಗೆ ಮುಂದಾದದರು. ಆದರೆ ಜಾದವ್ ಸಂಸದರ ಮನವೊಲಿಕೆ ವಿಫಲವಾಗಿದ್ದು, ಸಭೆಯೂ ರದ್ದಾದ ಘಟನೆ ನಡೆದಿದೆ.
-ಉದಯವಾಣಿ

Write A Comment