ಕರ್ನಾಟಕ

50 ಫ್ಲ್ಯಾಟ್​ಗಳ ಅಪಾರ್ಟ್​ಮೆಂಟ್​ಗೆ ತ್ಯಾಜ್ಯ ಘಟಕ ಕಡ್ಡಾಯ

Pinterest LinkedIn Tumblr

tajyaಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 50ಕ್ಕೂ ಹೆಚ್ಚು ಫ್ಲ್ಯಾಟ್​ಗಳಿರುವ ಅಪಾರ್ಟ್​ವೆುಂಟ್​ಗಳು ತ್ಯಾಜ್ಯ ಸಂಸ್ಕರಣಾ ಘಟಕ ಹೊಂದುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುವವರ ಮೇಲೆ ನಿಗಾ ವಹಿಸಲು ಅಧಿಕಾರಿಗಳು ಮುಂದಾಗಿದ್ದು, ಈಗಾಗಲೇ ತಪಾಸಣೆ ಕೈಗೊಂಡಿದ್ದಾರೆ. ಹೋಟೆಲ್ ಮತ್ತಿತರ ಉದ್ಯಮಗಳಲ್ಲಿ ತ್ಯಾಜ್ಯ ವಿಂಗಡಣೆ ಕ್ರಮ ಪರಿಶೀಲಿಸುತ್ತಿರುವ ಅಧಿಕಾರಿಗಳು ತಪ್ಪಿತಸ್ಥರಿಗೆ ದಂಡ ವಿಧಿಸುತ್ತಿದ್ದಾರೆ. ದೊಡ್ಡ ಅಪಾರ್ಟ್​ವೆುಂಟ್​ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗುವಂತೆ ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ಮನೆಗಳಿರುವ ಅಪಾರ್ಟ್​ವೆುಂಟ್​ಗಳಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಕಡ್ಡಾಯಕ್ಕೆ ಚಿಂತನೆ ನಡೆಸಿದ್ದಾರೆ.

ಹೆಚ್ಚು ಉತ್ಪಾದಿಸುವವರ ಪತ್ತೆ: ಹೆಚ್ಚು ತ್ಯಾಜ್ಯ ಉತ್ಪಾದಿಸುವವರನ್ನು ಪತ್ತೆ ಹಚ್ಚಲು ವಲಯ ಮತ್ತು ವಾರ್ಡ್​ವುಟ್ಟದ ಅಧಿಕಾರಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವಲಯ ಹಾಗೂ ವಾರ್ಡ್ ವ್ಯಾಪ್ತಿಯಲ್ಲಿನ ಹೋಟೆಲ್, ಪಿಜಿ, ಅಪಾರ್ಟ್​ವೆುಂಟ್​ಗಳಿಗೆ ತೆರಳಿ ಅತಿ ಹೆಚ್ಚು ತ್ಯಾಜ್ಯ ಉತ್ಪಾದಿಸುವವರನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನಿಯಮವಿದ್ದರೂ ಜಾರಿಯಿಲ್ಲ: ಅಪಾರ್ಟ್​ವೆುಂಟ್​ಗಳಲ್ಲಿ ಉತ್ಪಾದನೆ ಯಾಗುವ ಕಸವನ್ನು ಅಲ್ಲಿಯೇ ಸಂಸ್ಕರಿಸಬೇಕೆಂಬ ನಿಯಮವಿದ್ದರೂ, ಯಾರೂ ಪಾಲಿಸುತ್ತಿಲ್ಲ. ನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಲು ಪಾಲಿಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಕಿರು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಅಸಾಧ್ಯವೆನಿಸಿದ ಅಪಾರ್ಟ್​ವೆುಂಟ್ ನಿವಾಸಿಗಳು ನಿಶ್ಚಿತ ಶುಲ್ಕ ಪಾವತಿಸಿದರೆ ಬಿಬಿಎಂಪಿ ಸಿಬ್ಬಂದಿ ಕಸವನ್ನು ಪಾಲಿಕೆ ಸಂಸ್ಕರಣಾ ಘಟಕಗಳಿಗೆ ಸಾಗಿಸುತ್ತಾರೆ.

ಪರಿಸರ ಇಂಜಿನಿಯರ್ ನೇಮಕ

ವಲಯ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳಲ್ಲಿನ ಕಾರ್ಯದ ಬಗ್ಗೆ ಸಮಗ್ರ ಮಾಹಿತಿ ಪಡೆಯುವ ಸಲುವಾಗಿ ತಾಂತ್ರಿಕ ಸಹಾಯಕರನ್ನಾಗಿ ಪರಿಸರ ಇಂಜಿನಿಯರ್​ಗಳನ್ನು ನೇಮಕ ಮಾಡಲಾಗಿದೆ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಿಗೆ ತಲಾ ಇಬ್ಬರು ಮತ್ತು ಉಳಿದ 5 ವಲಯಗಳಿಗೆ ತಲಾ ಒಬ್ಬರು ಪರಿಸರ ಇಂಜಿನಿಯರ್​ಗಳನ್ನು ನೇಮಕ ಮಾಡಲಾಗಿದೆ.

ಶೇ.30 ಜನರಿಂದ ತ್ಯಾಜ್ಯ ವಿಂಗಡಣೆ

ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಿಸಲು ಮೂಲದಲ್ಲೇ ಕಸ ವಿಂಗಡಣೆ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರದಾದ್ಯಂತ ಪ್ರಚಾರ ನಡೆಸಲಾಗುತ್ತಿದೆ. ಇದರಿಂದ ಪ್ರೇರಿತರಾದ ಶೇ.30 ಜನರು ಕಸ ವಿಂಗಡಿಸುತ್ತಿದ್ದು, ಉಳಿದವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಬ್ಲ್ಯಾಕ್ ಸ್ಪಾಟ್ ಕಡಿಮೆ ಮಾಡಲು ಕ್ರಮ

ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕಸ ಶೇಖರಣೆಗೊಳ್ಳುವ ಜಾಗಗಳು (ಬ್ಲ್ಯಾಕ್ ಸ್ಪಾಟ್) ಇರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಜಾಗಗಳಲ್ಲಿನ ತ್ಯಾಜ್ಯ ತೆರವುಗೊಳಿಸಿದರೂ, ಸಾರ್ವಜನಿಕರು ಅಲ್ಲಿಯೇ ಕಸ ಸುರಿಯುವುದನ್ನು ಮುಂದುವರಿಸುತ್ತಿದ್ದಾರೆ. ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಇದು ಬಹುದೊಡ್ಡ ತೊಡಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಳಕು ತಾಣಗಳಲ್ಲಿ ಕಸ ತಂದು ಸುರಿಯುವರನ್ನು ಪತ್ತೆ ಮಾಡಿ ಅವರಿಗೆ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಕೊಳಕು ತಾಣದಲ್ಲಿ ಕಸ ಶೇಖರಣೆಯಾಗುತ್ತಿದ್ದಂತೆ ಅದನ್ನು ತೆರವುಗೊಳಿಸಲು ಹೆಚ್ಚುವರಿ ಟ್ರಿಪ್​ಗಳನ್ನು ಮಾಡುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದಾರೆ. ಹಾಗೆಯೇ, ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಗೆ ವಾರದಲ್ಲಿ ಒಮ್ಮೆ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ರ್ಚಚಿಸುವಂತೆ ಆಯಾ ವಲಯ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ.

Write A Comment