ಕರ್ನಾಟಕ

ಕನ್ನಡ ಬಲ್ಲವರೇ ಲೋಕಾಯುಕ್ತ ಆಗಲಿ: ಚಂದ್ರು ಒತ್ತಾಯ

Pinterest LinkedIn Tumblr

CHANDRU-1ಬೆಂಗಳೂರು: ಕನ್ನಡ ಬಲ್ಲವರನ್ನೇ ಕರ್ನಾಟಕ ಲೋಕಾಯುಕ್ತ ಹುದ್ದೆಗೆ ನೇಮಿಸಬೇಕು ಎಂದು ‘ಕನ್ನಡ ನುಡಿ–ಕನ್ನಡ ಗಡಿ ಜಾಗೃತಿ ಸಮಿತಿ’ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು  ಆಗ್ರಹಿಸಿದ್ದಾರೆ.

ರಾಜ್ಯದ ಎಲ್ಲ ವ್ಯವಹಾರಗಳು ರಾಜ್ಯ ಭಾಷೆಯಲ್ಲಿಯೇ ನಡೆಯಬೇಕು ಎಂಬುದು ಒಪ್ಪಿತ ಸಂಗತಿ.  ಹಾಗೆಯೇ ಗ್ರಾಮೀಣ ಪ್ರದೇಶದ ಜನರು ದೂರು ನೀಡಲು ಬರುವಾಗ ಲೋಕಾಯುಕ್ತರಿಗೆ ಕನ್ನಡ ಬರಬೇಕಿರುವುದು ಅಪೇಕ್ಷಣೀಯ ಎಂದು ಅವರು ಹೇಳಿದ್ದಾರೆ.

‘ಕೆಲವರು ಬೇರೆ ರಾಜ್ಯದವರನ್ನು ಲೋಕಾಯುಕ್ತ ಹುದ್ದೆಗೆ ತರುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೆ, ಅರ್ಹತೆ, ಪ್ರಾಮಾಣಿಕತೆಯ ಆಧಾರದಲ್ಲಿ ಕನ್ನಡದ ನ್ಯಾಯಮೂರ್ತಿಗಳನ್ನೇ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

Write A Comment