ಕರ್ನಾಟಕ

‘ನನ್ನ ಗೀತೆಯ ಪಲ್ಲವಿ ಕದಿಯುತ್ತಾರೆ’: ಸಾಹಿತಿ ದೊಡ್ಡರಂಗೇಗೌಡ ಬೇಸರ

Pinterest LinkedIn Tumblr

Academyಬೆಂಗಳೂರು: ‘ಎಪ್ಪತ್ತರ ದಶಕದಲ್ಲಿ ನಾನು ಬರೆದ ಗೀತೆಗಳ ಪಲ್ಲವಿಗಳನ್ನೇ ಕದ್ದು ಈಗಿನ ಚಿತ್ರಗೀತೆಗಳಿಗೆ ಅಳವಡಿಸಿ ಕೊಳ್ಳಲಾಗುತ್ತಿದೆ’ ಎಂದು ಸಾಹಿತಿ ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ನಡೆದ ಕಲಾ ಪ್ರಪಂಚ ಕಲ್ಚರಲ್‌ ಅಕಾಡೆಮಿ ಉದ್ಘಾಟನೆ ಹಾಗೂ ‘ಭಾವಗೀತೋತ್ಸವ’ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಂಗ್ಲಿಷ್‌ ಭಾಷೆಯ ಚಲನಚಿತ್ರಗಳ ಸಂಗೀತದ ಟ್ಯಾಕ್‌ಗಳನ್ನು ಕತ್ತರಿಸಿ ಕನ್ನಡದ ಚಲನಚಿತ್ರಗಳಿಗೆ ಬಳಸಿಕೊಳ್ಳುವ ಕೆಟ್ಟ ಪರಿಪಾಠ ಬೆಳೆಯುತ್ತಿದೆ. ನಕಲು ಮಾಡುವುದು ಸಾಮಾನ್ಯವಾಗಿದ್ದು, ಸ್ವಂತಿಕೆ ಇಲ್ಲವಾಗಿದೆ’ ಎಂದರು.

‘ಭಾವಗೀತೆ, ಸಂಗೀತ ಕಾರ್ಯಕ್ರಮಗಳಲ್ಲಿ ಸಿನಿಮಾ ಅನುಕರಣೆಯ ಛಾಯೆ ಕಂಡುಬರುತ್ತದೆ. ವಿದೇಶಿ ರಾಗ, ಶ್ರುತಿಯನ್ನು ಅಳವಡಿಸಿ ಕಲಬೆರಕೆ ಮಾಡಲಾಗುತ್ತಿದೆ. ಸಂಗೀತ ಸಂಯೋಜಕರಿಗೆ ಕವಿತೆಯ ಮೂಲಾರ್ಥವನ್ನು ಗ್ರಹಿಸುವ ಶಕ್ತಿ ಇರಬೇಕು’ ಎಂದರು.

Write A Comment