ಹೊಸಕೋಟೆ, ಜ.20- ತಾನೇ ಕಟ್ಟಿಸಿದ ದೇವಾಲಯವನ್ನು ಅದೇ ವ್ಯಕ್ತಿ ಕೆಡವಿ ಹಾಕಿರುವ ಘಟನೆ ಪಟ್ಟಣದಲ್ಲಿ ನಡೆದಿದ್ದು , ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ದೊಡ್ಡಕಡತೂರಿನ ನಿವಾಸಿ ನಾರಾಯಣಸ್ವಾಮಿ ಎಂಬುವರು ಪಟ್ಟಣದ ಚಿಕ್ಕಮಾನಿಕೆರೆ ಕಟ್ಟೆ ಸಮೀಪದ ಖಾಸಗಿ ಜಮೀನಿನಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ನಿರ್ಮಿಸಿದ್ದರು. ಆದರೆ ನಿನ್ನೆ ಸಂಜೆ 6.30ರಲ್ಲಿ ನಾರಾಯಣಸ್ವಾಮಿ ಏಕಾಏಕಿ ಬಂದು ಜೆಸಿಬಿ ಯಂತ್ರದ ಮೂಲಕ ದೇವಾಲಯವನ್ನು ಕೆಡವಿ ಹಾಕಿದ್ದಾರೆ. ಆತನ ವರ್ತನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಜೆಸಿಬಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾರಾಯಣಸ್ವಾಮಿ ಕೆಲವರು ಬೆಂಗಳೂರಿನಿಂದ ದೂರವಾಣಿ ಕರೆ ಮಾಡಿ ದೇವಾಲಯ ಕೆಡವಬೇಕು. ಇಲ್ಲದಿದ್ದರೆ ನಿನ್ನ ಪ್ರಾಣ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ದೇವಾಲಯ ಕೆಡವಬೇಕಾಯಿತು ಎಂದು ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಇನ್ಸ್‌ಪೆಕ್ಟರ್ ಅಶ್ವತ್ಥ್ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರೂ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.