ಬೆಂಗಳೂರು,ಜ.೨೭-ಮುನಿರೆಡ್ಡಿಪಾಳ್ಯದ ಬಿಬಿಎಂಪಿ ವಲಯ ಕಚೇರಿ ಬಳಿ ಇಂದು ಮಧ್ಯಾಹ್ನ ಕ್ಲುಲಕ ವಿಚಾರವಾಗಿ ಜಗಳ ಉಂಟಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ವಲಯ ಕಚೇರಿ ಬಳಿ ಮಧ್ಯಾಹ್ನ ೧೨ ರವೇಳೆ ಕಾಂಗ್ರೆಸ್ ಕಾರ್ಯಕರ್ತ ಮೆಹಬೂಬ್ ಮೇಲೆ ಇನ್ನಿಬ್ಬರು ಕಾಂಗ್ರೆಸ್ ಕಾರ್ಯಕರ್ತರು ಸೊಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಜೆಸಿನಗರ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು ವಯಕ್ತಿಕ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.