ಬೆಂಗಳೂರು : ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಥಾಯ್‌ಲ್ಯಾಂಡ್ ಮತ್ತು ಮಲೇಷ್ಯಾದಿಂದ ಆಗಮಿಸಿದ 2 ವಿಮಾನಗಳಲ್ಲಿದ್ದ 1.37 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಎಸ್ಸೆ ಲೈಟ್ಸ್ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದ್ದಾರೆ.
ಕೌಲಾಲಂಪುರದಿಂದ ಆಗಮಿಸಿದ್ದ ಮಲೇಷ್ಯಾ ಏರ್‌ಲೈನ್ಸ್ ಮತ್ತು ಬ್ಯಾಂಕಾಕ್‌ನಿಂದ ಆಗಮಿಸಿದ ಥಾಯ್ ಏರ್‌ಲೈನ್ಸ್ ವಿಮಾನದಲ್ಲಿ ದ್ದ 94 ಬ್ಯಾಗ್ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಯ ವೇಳೆ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ ಎಂದು ಮಾದ್ಯಮಗಳ ವರದಿ ತಿಳಿಸಿದೆ.
-ಉದಯವಾಣಿ