ಬೆಂಗಳೂರು: ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಅಲಯನ್ಸ್ ವಿಶ್ವ ವಿದ್ಯಾಲಯದ ಚಾನ್ಸೆಲರ್ ಮಧುಕರ್ ಅಂಗುರ್ ಅವರನ್ನು ಶನಿವಾರ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿಸಲಾಗಿದೆ.
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಅತ್ಯಾಚಾರವೆಸಗಿದ ಆರೋಪದ ಮೇಲೆ ಡಾ.ಮಧುಕರ್ ಅಂಗುರ್ ಅವರನ್ನು ಬಂಧಿಸಲಾಗಿದೆ. ಈ ಯುವತಿ ಚಾನ್ಸೆಲರ್ ನಾ ಅಕ್ಕನ ಮಗಳಾಗಿದ್ದಾಳೆ. ಇವರು ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ವಾಸವಾಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದ ಮಧುಕರ್ ಜಿ ಅಂಗುರ್ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ.
2011ರಿಂದಲೂ ಅಂಗುರ್ ಅಕ್ಕನ ಮಗಳಾದ ಆ ಯುವತಿಯೊಂದಿಗೆ ಸಂಬಂಧ ಹೊಂದಿದ್ದರಂತೆ. ಈ ವಿಷಯದ ತಿಳಿದ ಪೋಷಕರು ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ನಿರಾಕರಿಸಿದ ಅಂಗುರ್ ಬೇರೊಬ್ಬ ಯುವತಿಯನ್ನು ಕೈಹಿಡಿದಿದ್ದಾನೆ. ಅಲ್ಲಿಂದ ಎರುಡು ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಯ ಮೂಡಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಚಾನ್ಸೆಲರ್ ಮಧುಕರ್ ಅಂಗುರ್ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ಕಳುಹಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.