ಬೆಂಗಳೂರು,ಫೆ.೬-ಹಲ್ಲೆ ಪ್ರಕರಣದಲ್ಲಿ ತಾಂಜೇನಿಯಾ ವಿದ್ಯಾರ್ಥಿಯು ಹಣೆದ ಕಟ್ಟುಕಥೆಗೆ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಪಡಿಸಿರುವುದಕ್ಕೆ ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲ ಸಾರ್ವಜನಿಕ ವಲಯದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ.
ತಾಂಜೇನಿಯಾ ವಿದ್ಯಾರ್ಥಿಯು ಪ್ರಕರಣದ ಕುರಿತು ಕಟ್ಟುಕಥೆ ಸೃಷ್ಠಿಸಿರುವುದು ಹಿರಿಯ ಪೊಲೀಸ್ ಆಧಿಕಾರಿಗಳ ಗಮನಕ್ಕೆ ಬಂದಿದ್ದರೂ ತಾಂಜೇನಿಯಾ ಹೈಕಮೀಷರ್ ಅಲ್ಲದೇ ವಿದೇಶಿ ಪ್ರಜೆಗಳಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎನ್ನುವುದನ್ನು ತೋರಿಸಲು ಇನ್ಸ್‌ಪೆಕ್ಟರ್ ಪ್ರವೀಣ್ ಬಾಬು ಸೇರಿ ನಾಲ್ವರಿಗೆ ಶಿಕ್ಷೆ ನೀಡಿರುವುದು ಸರಿಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ತಾಂಜೇನಿಯಾ ವಿದ್ಯಾರ್ಥಿನಿ ಹಣೆದ ಕಟ್ಟುಕತೆ ಶಿಕ್ಷೆ ಸರಿಯಲ್ಲ
ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ಇತರರ ಅಮಾನತು ರದ್ದು ಪಡಿಸಲು ಆಗ್ರಹ
ಅಮಾನು ವಿರುದ್ಧ ತಿರುಗಿಬಿದ್ದ ಸಂಘಸಂಸ್ಥೆಗಳು
ಅಮಾನತುಗೆ ಪೊಲೀಸರಲ್ಲೂ ಒಳೊಳಗೆ ಅತೃಪ್ತಿ
ಮಾಡದ ತಪ್ಪಿಗೆ ಅಮಾನತ್ತಾಗಿರುವ ಇನ್ಸ್‌ಪೆಕ್ಟರ್ ಪ್ರವೀಣ್‌ಬಾಬು ಮುಖ್ಯಪೇದೆ ಜಗದೀಶ್,ಪೇದೆಗಳಾದ ಮಂಜುನಾಥ್ ಹಾಗೂ ಹಿನ್ನೇಶ್ ಅವರ ಅಮಾನತು ರದ್ದು ಪಡಿಸಿ ಕೂಡಲೇ ಕರ್ತವ್ಯ ನಿಯೋಜಿಸುವಂತೆ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕರವೇ ಸೇರಿ ಇತರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ಅಮಾನತು ರದ್ದು ಪಡಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.
ಅಪಘಾತದ ವೇಳೆ ಗಾಯಗೊಂಡಿರುವ ದಂಪತಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿತ್ತು ಅದನ್ನೇ ಅಮಾನತು ಗೊಂಡಿರುವ ಪೊಲೀಸರು ಮಾಡಿದ್ದಾರೆ ಅದಕ್ಕಾಗಿ ಅವರಿಗೆ ಶಿಕ್ಷೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಅಲ್ಲದೇ ಬಹುತೇಕ ಪೊಲೀಸರು ಕೂಡ ಇನ್ಸ್‌ಪೆಕ್ಟರ್ ಪ್ರವೀಣ್‌ಬಾಬು ಮುಖ್ಯಪೇದೆ ಜಗದೀಶ್,ಪೇದೆಗಳಾದ ಮಂಜುನಾಥ್ ಹಾಗೂ ಹಿನ್ನೇಶ್ ಅವರನ್ನು ಅಮಾನತು ಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತರಾದರೂ ಬಹಿರಂಗವಾಗಿ ಇಂತಹ ಆನ್ಯಾಯವನ್ನು ಹೇಳಲು ಹಿಂದೇಟು ಹಾಕುತ್ತಿದ್ದಾರೆ.
ಈ ನಡುವೆ ತಾಂಜೇನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ಸಂಪೂರ್ಣ ಕಟ್ಟು ಕಥೆ ಎನ್ನುವುದಕ್ಕೆ ಸಾಕ್ಷ್ಯ ದೊರೆತಿದೆ ಕಳೆದ ಜನವರಿ ೩೧ರ ರಾತ್ರಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.
ಆದರೆ ಘಟನೆ ನಡೆದ ದಿನ ಆ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಅಂದಿನ ದೃಶ್ಯಗಳು ಸೆರೆಯಾಗಿವೆ. ಯುವತಿ ಮತ್ತು ಯುವಕ ಹೆಸರುಘಟ್ಟ ರಸ್ತೆಯಲ್ಲಿ ಬಂದ ಬಿಎಂಟಿಸಿ ಬಸ್ ಹತ್ತುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿದೆ. ಅದರಲ್ಲಿ ಯುವತಿಯನ್ನು ಬೆತ್ತಲುಗೊಳಿಸಲಾಗಿತ್ತು, ಬಸ್‌ನಿಂದ ಹೊರಗೆ ತಳ್ಳಿದ್ದರು ಎಂಬ ಆರೋಪ ಸುಳ್ಳು ಅನ್ನೋದು ಖಚಿತವಾಗುತ್ತದೆ.
ಘಟನೆ ನಡೆದ ಕೆಲವೇ ಸೆಕೆಂಡುಗಳಲ್ಲಿ ಆಕೆ ಬಸ್ ಹತ್ತಲು ಬಂದಾಗ ಜನರ ಗುಂಪು ಆಕೆಯನ್ನು ಹಿಂಬಾಲಿಸುತ್ತದೆ. ಓಡಿ ಹೋಗುತ್ತಿದ್ದವಳನ್ನು ನಿಲ್ಲುವಂತೆ ಸೂಚಿಸುತ್ತದೆ.
ಆದರೆ ಆಕೆ ಆವೇಳೆಗಾಗಲೇ ಬಸ್‌ನ್ನು ತನ್ನ ಸ್ನೇಹಿತನೊಟ್ಟಿಗೆ ಹತ್ತಿಕೊಂಡಿದ್ದರು.
ಯುವತಿ ಮಾತ್ರ ಕಥೆ ಕಟ್ಟಿ ಬಸ್‌ನಿಂದ ತನ್ನನ್ನು ಕೆಳಗೆ ನೂಕಿ ಬಟ್ಟೆ ಹರಿದರು ಎಂದು ಹೇಳಿಕೆ ನೀಡಿದ್ದಾಳೆ. ಆದರೆ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ಸಾಕ್ಷ್ಯ ಆಕೆಯ ಹೇಳಿಕೆ ಸುಳ್ಳು ಅನ್ನುವುದನ್ನ ಸಾಬೀತು ಪಡಿಸುತ್ತದೆ.
ಸಿಸಿ ಟಿವಿಯಲ್ಲಿ ಯುವತಿಯ ಮೇಲೆ ಯಾವುದೇ ಹಲ್ಲೆಯಾಗಲಿ ಬಟ್ಟೆ ಹರಿದಿರುವುದಾಗಲಿ ಸಾಬೀತಾಗದಿರುವುದರಿಮದ ಪೊಲೀಸರನ್ನು ಅಮಾನತು ಪಡಿಸುವುದು ಅಮಾಯಕರನ್ನು ಬಂಧಿಸಿ ಶಿಕ್ಷಿಸುವುದಕ್ಕೂ ವಿರೋಧ ವ್ಯಕ್ತವಾಗಿದೆ.
ಟಿವಿ ಚಾನಲ್‌ಗಳಲ್ಲಿ ಸಿಸಿ ಟಿವಿಯ ದೃಶ್ಯಾವಳಿಗಳು ಬಿತ್ರವಾಗುತ್ತಿದ್ದಂತೆ ಅಮಾನತುಗೊಂಡಿರುವ ಪೊಲೀಸರ ಮೇಲೆ ಕೈಗೊಂಡ ಕ್ರಮಕ್ಕೆ ನಿರಪರಾಧಿಗಳನ್ನು ಬಂದಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ಆಕ್ರೋಶಗಳು ವ್ಯಕ್ತವಾಗಿವೆ.
ತನಿಖೆ ತೀವ್ರ
ತಾಂಜೇನಿಯಾ ವಿದ್ಯಾರ್ಥಿಯು ಮೇಲೆ ನಡೆದಿರುವ ಹಲ್ಲೆ ಪ್ರಕರಣ ತನಿಖೆ ನಡೆಸುತ್ತಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‌ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಾಮರ್ಶೆ ನಡೆಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಸಂತ್ರಸ್ಥ ಯುವತಿ ಆಕೆಯ ಸ್ನೇಹಿತರು ಅಪಘಾತ ನಡೆಸಿದ ತಾಂಜೇನಿಯಾ ಯುವಕನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗಿದ್ದು ಅದಷ್ಟು ಬೇಗ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಚರಣ್ ರೆಡ್ಡಿ ತಿಳಿಸಿದ್ದಾರೆ.