ಕರ್ನಾಟಕ

ನಾಲ್ವರು ಅತ್ಯಾಚಾರಿಗಳಿಗೆ ಜೀವನ ಪರ್ಯಾಂತ ಜೈಲುಶಿಕ್ಷೆ: ಬೀದರ್ ಕೋರ್ಟ್

Pinterest LinkedIn Tumblr

jailಬೀದರ್: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ನಾಲ್ವರು ಆರೋಪಿಗಳಿಗೆ ಬೀದರ್ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಜೀವನ ಪರ್ಯಾಂತ ಜೈಲು ಶಿಕ್ಷೆ ವಿಧಿಸಿದೆ.

2014ರ ಜೈಲು 18ರಂದು ಮೊಹಮ್ಮದ್ ಸಯೀದ್ ಜಮಾದಾರ್(22), ತಾಜುದ್ದೀನ್(23), ಯೂಸುಫ್(22) ಹಾಗೂ ಫಿರೋಜ್ ಬೇಫಾರೆ(22) ಎಂಬುವರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂಜೀವ್ ಕುಮಾರ್ ಅಂಚಾಟೆ ಅವರು ಅಪರಾಧಿಗಳಿಗೆ ಜೀವನ ಪರ್ಯಾಂತ ಜೈಲು ಶಿಕ್ಷೆ ಹಾಗೂ ಪ್ರತಿಯೊಬ್ಬರಿಗೆ 10 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ.

ಬೀದರ್ ತಾಲೂಕಿನ ಬಗದಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

Write A Comment