ಕರ್ನಾಟಕ

ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ ಕೊಪ್ಪದ್ ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Pinterest LinkedIn Tumblr

cm

ಹುಬ್ಬಳ್ಳಿ, ಫೆ.12: ಹಿಮದ ಗಡ್ಡೆಗಳ ನಡುವಿನ ಆರು ದಿನಗಳ ಹೋರಾಟದಲ್ಲಿ ಗೆದ್ದು ಬಂದರೂ ಯಮನ ಜೊತೆಗಿನ ಹೋರಾಟದಲ್ಲಿ ಗೆಲುವು ಸಾಧಿಸಲಾಗದೆ ಸಾವಿಗೆ ಶರಣಾದ ಹುತಾತ್ಮ ಯೋಧ ಸಿಯಾಚಿನ ಹೀರೊ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನ ಗಂಡುಗಲಿ ಹನುಮಂತಪ್ಪ ಕೊಪ್ಪದ ಅವರಿಂದು ಪಂಚಭೂತಗಳಲ್ಲಿ ಲೀನವಾದರು. ಮುಗಿಲು ಮುಟ್ಟಿದ ಆಕ್ರಂದನ, ನೆರೆದಿದ್ದವರ ಆಶ್ರುತರ್ಪಣದ ನಡುವೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕೊಪ್ಪದ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ವೀರಶೈವ ಧರ್ಮದ ವಿಧಿ ವಿಧಾನಗಳೊಂದಿಗೆ ಇಂದು ಮಧ್ಯಾಹ್ನ ನೆರವೇರಿತು.

ಗ್ರಾಮದ ಪೂಜಾರಿ (ಅರ್ಚಕ) ಈರಯ್ಯ ಹಿರೇಮಠ ಅವರಿಂದ ಲಿಂಗಾಯತ ವಿಧಿವಿಧಾನಗಳು ಪೂರ್ಣಗೊಂಡ ನಂತರ ಲಕ್ಷಾಂತರ ಜನರು, ಗಣ್ಯರ ಉಪಸ್ಥಿತಿಯಲ್ಲಿ ವೀರ ಹನುಮ ಹುತಾತ್ಮ ಪದವಿ ಪಡೆದು ಭಾರತಾಂಬೆಯ ಒಡಲಾಳ ಸೇರಿದ ದೃಶ್ಯ ಎಲ್ಲರ ಕಣ್ಣಲ್ಲೂ ತಮ್ಮಿಂದ ತಾನೇ ನೀರು ಬರಿಸಿತ್ತು.

1

ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಸಚಿವರಾದ ವಿನಯ ಕುಲಕರ್ಣಿ, ಎಚ್.ಕೆ. ಪಾಟೀಲ್, ಶಾಸಕರಾದ ಸಿ.ಎಸ್. ಶಿವಳ್ಳಿ, ಎನ್.ಎಚ್. ಕೋನರಡ್ಡಿ, ಅರವಿಂದ ಬೆಲ್ಲದ, ಮಾಜಿ ಶಾಸಕರು ಸೇರಿದಂತೆ ನಾಡಿನ ಹಲವು ಮಠಾಧೀಶರು ವೀರಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಪ್ರಧಾನ ಸುದ್ದಿ ಭಾರತಾಂಬೆ ಮಡಿಲಿಗೆ : ಸೈನಿಕ ರತ್ನನಿಗೆ ದೇಶಪ್ರೇಮಿಗಳ ಅಶ್ರುತರ್ಪಣ ವಿದಾಯರು.

ಬೆಟದೂರಿನ ಕೆರೆ ದಂಡೆ ಮೇಲೆ ನೆರೆದಿದ್ದ ಸಹಸ್ರಾರು ಅಭಿಮಾನಿಗಳು, ದೇಶಭಕ್ತರು, ವೀರ ಯೋಧನ ಸಂಬಂಧಿಕರ ಮುಗಿಲು ಮುಟ್ಟಿದ ಆಕ್ರಂದನ, ಜೈಕಾರ ಘೋಷಣೆಗಳ ನಡುವೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಇದಕ್ಕೂ ಮುನ್ನ ಕೊಪ್ಪದ್ ಅವರ ಪಾರ್ಥೀವ ಶರೀರವನ್ನು ಬೆಟದೂರಿನ ಸರ್ಕಾರಿ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

2

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ. ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಸೇನಾಧಿಕಾರಿಗಳು ಹಾಗೂ ಯೋಧರು ಅಗಲಿದ ಹುತಾತ್ಮ ಕೊಪ್ಪದ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಬೆಟದೂರಿನ ಅಕ್ಕಪಕ್ಕದ ಗ್ರಾಮಗಳ ಜನರು ತಂಡೋಪತಂಡವಾಗಿ ಆಗಮಿಸಿ ವೀರಯೋಧನ ಅಂತಿಮ ದರ್ಶನ ಪಡೆದು ಗುಣಗಾನ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.

ಶೋಕತಪ್ತ ಕುಟುಂಬ
ಕೊಪ್ಪದ್ ಅವರ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು. ಇಂದು ಬೆಳಗ್ಗಿನಿಂದಲೇ ಕೊಪ್ಪದ್ ಅವರ ಅಂತ್ಯಕ್ರಿಯೆಯ ಪೂರ್ವ ಸಿದ್ಧತೆಗಳು ನಡೆದಿದ್ದವು.

3

ಸಿಯಾಚಿನ್ ಹಿಮಗರ್ಭದಲ್ಲಿ 6 ದಿನಗಳವರೆಗೆ ಸಿಲುಕಿ ಉಸಿರು ಹಿಡಿದು ಹೊರಬಂದು, ದೆಹಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ನಿನ್ನೆ ಮಧ್ಯಾಹ್ನ ಹುತಾತ್ಮರಾದ ಹನುಮಂತಪ್ಪ ಕೊಪ್ಪದ ಅವರ ಪಾರ್ಥೀವ ಶರೀರವನ್ನು ನಿನ್ನೆ ರಾತ್ರಿ ಭಾರತೀಯ ವಾಪ್ರಧಾನ ಸುದ್ದಿ ಭಾರತಾಂಬೆ ಮಡಿಲಿಗೆ : ಸೈನಿಕ ರತ್ನನಿಗೆ ದೇಶಪ್ರೇಮಿಗಳ ಅಶ್ರುತರ್ಪಣ ವಿದಾಯಯುದಳದ ವಿಶೇಷ ವಿಮಾನದಲ್ಲಿ ನಗರದ ವಿಮಾನ ನಿಲ್ದಾಣಕ್ಕೆ 10.30 ರ ವೇಳೆಗೆ ತರಲಾಯಿತು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಜಿಲ್ಲಾಡಳಿತದ ವತಿಯಿಂದ ವಿಮಾನ ನಿಲ್ದಾಣದಲ್ಲಿ ಹನುಮಂತಪ್ಪ ಕೊಪ್ಪದ ಅವರ ಪಾರ್ಥೀವ ಶರೀರವನ್ನು ಬರಮಾಡಿಕೊಂಡು, ನಮನ ಸಲ್ಲಿಸಿದರು.

ನಂತರ ನೂರಾರು ದೇಶಪ್ರೇಮಿಗಳ `ಮತ್ತೆ ಹುಟ್ಟಿ ಬಾ’ ಎಂಬ ಜಯಘೋಷ, ಅಶ್ರುತರ್ಪಣದ ಮಧ್ಯೆ ನಗರದ ಕಿಮ್ಸ್ ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು.

ಬೆಳಗಿನ ಜಾವ 7 ಗಂಟೆಯವರೆಗೆ ಸೇನಾಪಡೆಯ ಕಣ್ಗಾವಲಿನಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ವೀರಯೋಧನ ಪಾರ್ಥೀವ ಶರೀರವನ್ನಿಡಲಾಗಿತ್ತು.

ಅಂತಿಮ ದರ್ಶನ
ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಕಿಮ್ಸ್ ಆಸ್ಪತ್ರೆಯಿಂದ ಸೇನಾಪಡೆಯ ತೆರೆದ ವಾಹನದಲ್ಲಿ ವಿದ್ಯಾನಗರ, ಹೊಸೂರು ಕ್ರಾಸ್, ಚನ್ನಮ್ಮ ವೃತ್ತ, ಕೋರ್ಟ್ ಸರ್ಕಲ್, ಲ್ಯಾಮಿಂಗ್ಟನ್ ರಸ್ತೆಯ ಮೂಲಕ ಹನುಮಂತಪ್ಪನವರ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ನಗರದ ನೆಹರು ಮೈದಾನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಸೇರಿದ ನೂರಾರು ದೇಶಪ್ರೇಮಿಗಳು ತಮ್ಮ ಕಂಬನಿಯೊಂದಿಗೆ ವೀರಯೋಧನಿಗೆ ಜಯಘೋಷ ಹಾಕಿ ಪುಷ್ಪ ಮಳೆಗೈಯ್ಯುವ ದೃಶ್ಯ ದೇಶಪ್ರೇಮದ ಸಂಕೇತದಂತಿತ್ತು.

ನೆಹರು ಮೈದಾನದಲ್ಲಿ ಸಾವಿರಾರು ಜನತೆ ಮುಂಜಾನೆ ಬಿದ್ದ ದಟ್ಟಮಂಜಿನ ಹನಿಗಳನ್ನು ಲೆಕ್ಕಿಸದೆ ಸಾಲುಗಟ್ಟಿ ನಿಂತು, ಸೈನಿಕ ರತ್ನನ ಅಂತಿಮ ದರ್ಶನ ಪಡೆದರು.

ರಂಭಾಪುರಿ ಪೀಠದ ಸೋಮೇಶ್ವರ ಶ್ರೀ, ಮೂರು ಸಾವಿರ ಮಠದ ಗುರು ಸಿದ್ಧರಾಜ ಯೋಗೇಂದ್ರ ಶ್ರೀ, ವಚನಾನಂದ ಶ್ರೀ, ಸಂಸದ ರಾಜೀವ ಚಂದ್ರಶೇಖರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ನೆಹರು ಮೈದಾನಕ್ಕೆ ಭೇಟಿ ನೀಡಿ ದುಃಖದ ಮಡುವಿನಲ್ಲಿ ಮುಳುಗಿದ ಹನುಮಂತಪ್ಪ ಕೊಪ್ಪದ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಮೆರವಣಿಗೆ
ನಗರದಲ್ಲಿನ ಸಾರ್ವಜನಿಕ ದರ್ಶನದ ನಂತರ 10.30ರ ವೇಳೆ ನೆಹರು ಮೈದಾನದಿಂದ ಹನುಮಂತಪ್ಪನವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ, ಗಬ್ಬೂರು, ಕೊಟಗೊಂಡಹುಣಸಿ, ಅದರಗುಂಚಿ, ನೂಲ್ವಿ, ಶೆರೇವಾಡ ಗ್ರಾಮಗಳ ಮೂಲಕ ಸ್ವಗ್ರಾಮ ಬೆಟದೂರಿಗೆ ಕೊಪ್ಪದ ಅವರ ಪಾರ್ಥೀವ ಶರೀರವನ್ನು ತರಲಾಯಿತು.
ಗ್ರಾಮಕ್ಕೆ ಧೀರ ಯೋಧನ ಪಾರ್ಥೀವ ಶರೀರ ತಲುಪುತ್ತಿದ್ದಂತೆ, ಗ್ರಾಮಸ್ಥರ ಕಂಬನಿಯ ಕಟ್ಟೆಯೊಡೆದು ಆಕ್ರಂದನ ಮುಗಿಲುಮುಟ್ಟಿತ್ತು.

ಅತ್ತ ಯೋಧನ ಮನೆಯಲ್ಲಿ ಮೌನ ವಾತಾವರಣ, ಶೋಕ ಮಡುಗಟ್ಟಿ ಕುಟುಂಬ ಸದಸ್ಯರ ಆಕ್ರಂದನ ಎಲ್ಲೆ ಮೀರಿತ್ತು. ಯಾರು ಸಮಾಧಾನ ಮಾಡಿದರೂ ಸುಮ್ಮನಾಗದ ಹನುಮಂತಪ್ಪನ ಪತ್ನಿ ಮಹಾದೇವಿಯ ಒಡಲಾಳದ ನೋವು ಸೇರಿದವರ ಮನಸ್ಸನ್ನು ಭಾರವಾಗಿಸಿತ್ತು.

Write A Comment