ಮೈಸೂರು: ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿನ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಪಿ.ಎನ್. ಮಹೇಶ್ಗೆ ಮೈಸೂರು ಹಾಗೂ ಹುಟ್ಟೂರು ಎಚ್.ಡಿ.ಕೋಟೆಯ ಜನತೆ ಮಂಗಳವಾರ ಅಂತಿಮ ಗೌರವ ನಮನ ಸಲ್ಲಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಬೆಳಗ್ಗೆ ಜಿಲ್ಲಾಡಳಿತದಿಂದ ಮಹೇಶ್ಗೆ ಗೌರವ ಸಲ್ಲಿಸಲಾಯಿತು. ನಂತರ ಮೈಸೂರು ಜನತೆ ಮಹೇಶ್ನ ಅಂತಿಮ ದರ್ಶನ ಪಡೆದರು.
ಮೃತದೇಹವನ್ನು ಹುಟ್ಟೂರು ಎಚ್.ಡಿ. ಕೋಟೆಗೆ ಕೊಂಡೊಯ್ದ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ವರ್ತಕರು ಅಂಗಡಿಮುಂಗಟ್ಟುಗಳನ್ನು ಬಂದ್ವಾಡುವ ಮೂಲಕ ದೇಶಕ್ಕಾಗಿ ಮಡಿದ ಯೋಧನಿಗೆ ನಮನ ಸಲ್ಲಿಸಿದರು.