ಬೆಂಗಳೂರು: ಅನೈತಿಕ ಸಂಬಂಧ ಆರೋಪ ಮಾಡಿರುವ ಪತಿ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿ, ಬಳಿಕ ತಾನೂ ಕತ್ತು ಕೊಯ್ದುಕೊಳ್ಳುವ ವಿಫಲ ಯತ್ನ ನಡೆಸಿರುವ ಘಟನೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಮತಾ (22) ಕೊಲೆಯಾದ ಮಹಿಳೆ. ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ ಪತಿರಾಯ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡರಾತ್ರಿ ಗಂಡ-ಹೆಂಡತಿ ಅನೈತಿಕ ಸಂಬಂಧದ ಬಗ್ಗೆ ಜಗಳವಾಗಿದ್ದು, ಸಿಟ್ಟಿಗೆದ್ದ ಪತಿ ನಾರಾಯಣಸ್ವಾಮಿ ಮಚ್ಚಿನಿಂದ ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.