ಕರ್ನಾಟಕ

ಪಂಚ ಲೋಹದ ಶ್ರೀರಾಮ ಮೂರ್ತಿಯ ಕಳ್ಳತನ

Pinterest LinkedIn Tumblr

ramaಕಲಬುರಗಿ,ಫೆ.18- ದೇವಸ್ಥಾನದ ಬಾಗಿಲ  ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಯ 50 ಕೆ.ಜಿ. ತೂಕದ  ಶ್ರೀ ರಾಮನ ಮೂರ್ತಿಯನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆ ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ತಡರಾತ್ರಿ  ನಡೆದಿದೆ. ಬೆಳಗ್ಗೆ ದೇವಸ್ಥಾನಕ್ಕೆ ಅರ್ಚಕರು ಬಂದು ನೋಡಿದಾಗ  ಶ್ರೀ ರಾಮನ ಮೂರ್ತಿ ಇಲ್ಲದಿರುವುದು ಕಂಡು ತೀವ್ರ ಆತಂಕಕ್ಕೊಳಗಾಗಿ ಕೂಡಲೇ ಪೊಲೀಸರಿಗೆ ದೂರು ನೀಡಿದರು.

ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಹಿರಿಯ ಪೊಲೀಸ್ ಅಕಾರಿಗಳು ಪರಿಶೀಲನೆ ನಡೆಸಿದರು. ನೆರೆಯ ತೆಲಂಗಾಣ ಅಥವಾ ಮಹಾರಾಷ್ಟ್ರದ ತಂಡವೊಂದು ಈ ಕಳ್ಳತನ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ದೂರಿದ್ದಾರೆ. ರಾತ್ರಿ ಗಸ್ತು  ವ್ಯವಸ್ಥೆ ಸರಿಯಾಗಿಲ್ಲದನ್ನು ಗಮನಿಸಿ ಕಳ್ಳರು ಈ ಚಳಕ ಮೆರೆದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳ್ಳರನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗವುದು, ಶೀಘ್ರವೇ ಬಂಸಲಾಗುವುದು ಯಾವುದೇ ಆತಂಕಕ್ಕೊಳಗಾಗಬೇಡ ಎಂದು ಹಿರಿಯ ಪೊಲೀಸ್ ಅಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿದೆ. ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Write A Comment