ಕರ್ನಾಟಕ

ಐ.ಪಿ.ಎಸ್ ಅಧಿಕಾರಿ ಹರೀಶ್‌ರವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಸಾವಿನ ಹಿಂದೆ ದೊಡ್ಡ ಶ್ರೀಮಂತ ಕುಳಗಳ ಕೈವಾಡವಿ

Pinterest LinkedIn Tumblr

harishಕೊರಟಗೆರೆ, ಫೆ.೨೦- ತಮಿಳುನಾಡಿನ ಚೆನೈಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐ.ಪಿ.ಎಸ್ ಅಧಿಕಾರಿ  ಹರೀಶ್‌ರವರ ಸಾವಿನ ಹಿಂದೆ ದೊಡ್ಡ  ಶ್ರೀಮಂತ ಕುಳಗಳ ಕೈವಾಡವಿದ್ದು ಇದರ ತನಿಖೆಯನ್ನು  ಸಿಬಿಐಗೆ ವಹಿಸಬೇಕು ಆಗ್ರಹಿಸಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನಯಾಜ್ ಅಹಮದ್ ನೇತೃತ್ವದಲ್ಲಿ  ಕನ್ನಡಪರ ಸಂಘಟನೆಗಳು  ಪ್ರತಿಭಟನೆ ನಡೆಸಿದವು.ಕರ್ನಾಟಕದ ಸಾವಿರಾರು ಮಂದಿ ಕೂಲಿ ಕಾರ್ಮಿಕರು, ಹಿರಿಯ ದರ್ಜೆ ಅಕಾರಿಗಳು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರು ಹೊರ ರಾಜ್ಯಗಳಿಗೆ ತೆರಳಿ ತಮ್ಮ ಜೀವನೋಪಾಯಕ್ಕಾಗಿ ಜೀವನ ನಡೆಸುತ್ತಿದ್ದು, ಹೊರ ರಾಜ್ಯಗಳಲ್ಲಿ ನಮ್ಮ ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗಿದೆ.

ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ನಡೆಯುತ್ತಿದೆ, ಇಂತಹ ಪ್ರಕರಣಗಳು ಮರುಕಳಿಸದ ರೀತಿಯಲ್ಲಿ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಏಕೇಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ನಯಾಜ್ ಅಹಮದ್ ಮಾತನಾಡಿ, ಚೆನೈನ ಐ.ಪಿ.ಎಸ್ ಅಕಾರಿ ಹರೀಶ್ ಅವರ ಪ್ರಕರಣವನ್ನು ಕೂಡಲೇ ಸಿ.ಬಿ.ಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.  ಹಜರತ್ ಟಿಪ್ಪು ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಫಯಾಜ್, ದಲಿತ ಜಾಗೃತಿ ಸಮಿತಿಯ ಆನಂದ್‌ಕುಮಾರ್, ಜಿಲ್ಲಾ ಮಾದಿಗ ದಂಡೋರದ ನಾಗರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಹರೀಶ್, ರಘು ದಲಿತ ಮುಖಂಡ ಗಣೇಶ್ ಸೇರಿದಂತೆ ಇನ್ನಿತರೆ ಕನ್ನಡಪರ ಸಂಘಟನೆ ಮುಖಂಡರು ಹಾಜರಿದ್ದರು.

ಐಪಿಎಸ್ ಅಕಾರಿ ಹರೀಶ್ ಸಾವಿನ ಹಿಂದೆ ತಮಿಳುನಾಡು ಸರ್ಕಾರದ ಷಡ್ಯಂತ್ರ

ಆನೇಕಲ್, ಫೆ.೨೦- ಐಪಿಎಸ್ ಅಕಾರಿ ಹರೀಶ್ ಸಾವಿನ ಹಿಂದೆ ತಮಿಳುನಾಡು ಸರ್ಕಾರ ಷಡ್ಯಂತ್ರ ಇದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ದೇವು ಆರೋಪಿಸಿದರು.  ಐಪಿಎಸ್ ಅಕಾರಿ ಹರೀಶ್ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ನಿರಂತರವಾಗಿ ಕನ್ನಡಿಗರ ಮೇಲೆ  ದರ್ಪ ತೋರುತಿದ್ದು, ಅದರ ಷಡ್ಯಂತ್ರಕ್ಕೆ  ಹರೀಶ್ ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ಪ್ರಾಮಾಣಿಕ, ದಕ್ಷ ಅಕಾರಿ ಎಂದೇ ಹೆಸರು ಗಳಿಸಿದ್ದ ಹರೀಶ್ ಅವರನ್ನು ಕೆಲವು ದಿನಗಳ ಹಿಂದಷ್ಟೇ ಮಧುರೈನಿಂದ ಚೆನೈಗೆ ವರ್ಗಾವಣೆ ಮಾಡಿದ್ದು ಯಾವ ಉದ್ದೇಶಕ್ಕೆ ಎಂಬುದನ್ನು ತಮಿಳುನಾಡು ಸರ್ಕಾರ ಉತ್ತರ ನೀಡಬೇಕಿದೆ ಎಂದರು. ಜಯಕರ್ನಾಟಕ ಸಂಘಟನೆಯುವ ಯುವ ಘಟಕದ ಅಧ್ಯಕ್ಷ ಸುರೇಶ್ ಮಾತನಾಡಿ, ಐಪಿಎಸ್ ಅಕಾರಿ ಹರೀಶ್‌ಅವರು ಭ್ರಷ್ಟಾಚಾರ ನಿಗ್ರಹ ಹಾಗೂ ವಿಚಕ್ಷಣಾ ದಳದ ಸಹಾಯಕ ಪೊಲೀಸ್ ವರಿಷ್ಟಾಕಾರಿಯಾಗಿ ಕೆಲಸ ನಿರ್ವಹಿಸುತಿದ್ದು, ಕೆಲಲು ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು.

ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ  ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಬೇಕು ಎಂದು ಒತ್ತಾಯಿಸಿದರು.ಹೋರಾಟಗಾರರ ಅತ್ತಿಬೆಲೆ ಸೋನಿ, ಸುರೇಶ್, ಮಂಜು, ಕಿರಣ್ ಹೆಗಡೆ, ಮಹಾನ್, ಸಂಘ ಮತ್ತಿತರು ಹಾಜರಿದ್ದರು.

Write A Comment