ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಮನೆಯಲ್ಲಿ ಕನಿಷ್ಠ 50 ದುಬಾರಿ ವಾಚ್ ಗಳಿವೆ. 8 ದುಬಾರಿ ಮೊತ್ತದ ಕಾರುಗಳಿವೆ, ಅದರಲ್ಲಿ ಇನ್ನೂ ಎರಡು ಕಾರುಗಳಿಗೆ ರಿಜಿಸ್ಟ್ರೇಷನ್ ಕೂಡ ಆಗಿಲ್ಲ ಎಂದು ಎಂಎಲ್ ಸಿ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರ ಸ್ವಾಮಿ ಮನೆಯಲ್ಲಿ ದುಬಾರಿ ಬೈಕ್ ಇದೆ. ಸುಮಾರು. ಜೊತೆಗೆ 8 ದುಬಾರಿ ಕಾರುಗಳಿಗೆ ಅವುಗಳಿಗೆ ನಿನ್ನೆಯಿಂದ ಕವರ್ ಹಾಕಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಅವರು ದುಬೈ ನಲ್ಲಿ 6 ಕೋಟಿ ಬೆಲೆ ಬಾಳುವ ಕಾರು ಹಾಗೂ ಒಂದೂವರೆ ಕೋಟಿ ಮೌಲ್ಯದ ವಾಚ್ ಉಡುಗೊರೆಯಾಗಿ ಪಡೆದಿದ್ದರು. ಅವುಗಳನ್ನು ನೀಡಿದ್ದು ಯಾರು, ಅದಕ್ಕೆ ಪ್ರತಿಯಾಗಿ ಎಚ್ ಡಿ ಕೆ ಏನು ಕೆಲಸ ಮಾಡಿಕೊಟ್ಟಿದ್ದಾರೆ, ಆದಾಯ ತೆರಿಗೆ ಕಟ್ಟುವಾಗ ಈ ಲೆಕ್ಕ ತೋರಿಸಿದ್ದಾರಾ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರ ಬಳಿಯಿರುವ ಕಾರುಗಳ ಪಟ್ಟಿ
ನಿಖಿಲ್ ಗೌಡ ಬಳಿ 8 ಕೋಟಿ ರೂ. ಬೆಲೆ ಬಾಳುವ ಲ್ಯಾಂಬರ್ ಗಿನಿ ಕಾರು
ಕುಮಾರಸ್ವಾಮಿ ಬಳಿ 3 ಕೋಟಿಯ ರೇಂಜ್ ರೋವರ್ ಕಾರು
ಕುಮಾರಸ್ವಾಮಿ ಬಳಿ 1.2ಕೋಟಿಯ ಇನ್ಫಿನಿಟ್ ಕಾರು
ಕುಮಾರಸ್ವಾಮಿ ಗಿಫ್ಟ್ ಆಗಿ ಪಡೆದ ಹಮ್ಮರ್ , ಫೋರ್ಶ್ ಕಾರು ಇದೆ
ಕುಮಾರಸ್ವಾಮಿ ಬಳಿ ವಜ್ರ ಖಚಿತ ಫ್ರಾಂಕ್ ಮುಲ್ಲರ್, ರಾಡೋ ವಾಚ್ ಗಳಿವೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೇನು ಉಡುಗೊರೆ ಪಡೆದಿದ್ದರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿರುವ ಉಗ್ರಪ್ಪ ಮುಖ್ಯಮಂತ್ರಿಗಳಿಗೆ ಉಡುಗೊರೆ ಬರುವುದು ಸಹಜ. ಆ ಉಡುಗೊರೆಗಳನ್ನು ವಯಕ್ತಿಕವಾಗಿ ಬಳಸದೇ ಅವುಗಳನ್ನು ನಾಡಿನ ಆಸ್ತಿಯಾಗಿ ಇಡಬೇಕು. ಇಲ್ಲವೇ ಅವುಗಳನ್ನು ಹರಾಜು ಹಾಕಿ ಬಂದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಪಡೆದಿರುವ ಉಡುಗೊರೆಗಳನ್ನು ಹರಾಜು ಹಾಕಬೇಕೆಂದು ಕಾಂಗ್ರೆಸ್ ಮುಖಂಡರಾದ. ವಿಎಸ್ ಉಗ್ರಪ್ಪ. ಭೈರತಿ ಬಸವರಾಜ್ ಹಾಗೂ ರೇವಣ್ಣ ಮನವಿ ಮಾಡಿದ್ದಾರೆ.