ಕರ್ನಾಟಕ

ಪಿರಿಯಾಪಟ್ಟಣದಲ್ಲಿ ಮತದಾನ ಬಹಿಷ್ಕಾರ

Pinterest LinkedIn Tumblr

peeriyapatnaಬೆಟ್ಟದಪುರ : ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿನ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕಂಬೀಪುರ ಗ್ರಾಮದಲ್ಲಿ ಈ ಬಾರಿಯ ಪಂಚಾಯ್ತಿ ಚುನಾವಣೆಯಲ್ಲಿ ಕಂಬೀಪುರ ಗ್ರಾಮದಿಂದ ಮತಗಟ್ಟೆ ಬದಲಾವಣೆ ಮಾಡಿವುದನ್ನು ವಿರೋಧಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ತಾಲೂಕಿನ ಕಂಬೀಪುರ ಗ್ರಾಮದಿಂದ ಸುಮಾರು 6ರಿಂದ 7 ಕೀ.ಮೀ ಇರುವ ಚಾಮರಾಯನಕೋಟೆ ಗ್ರಾಮಕ್ಕೆ ಮತಗಟ್ಟೆ ಸ್ಥಳಾಂತರಗೊಂಡಿರುವುದರಿಂದ  ಮತದಾನ ಬಹಿಷ್ಕಾರ ಮಾಡಿದ್ದಾರೆ.

ಇನ್ನು ಈ ಗ್ರಾಮದಲ್ಲಿ ಸುಮಾರು 250ಕ್ಕೂ ಹೆಚ್ಚು ಮತದಾರರು ಇದ್ದಾರೆ. ಅದಲ್ಲದೆ ಅಂಗವಿಕಲರು ಮತ್ತು ವಯಸ್ಸಾದವರು ಇದ್ದಾರೆ. ಸಂಜೆ ವೇಳೆಗೆ ನಮಗೆ ಮತಗಟ್ಟೆ ಬದಲಾವಣೆ ಮಾಡಿದರೆ ಮತದಾನ ಮಾಡುವುದಾಗಿ ಗ್ರಾಮಸ್ಥರು ಹೇಳಿಕೆ ನೀಡಿದ್ದರು.

Write A Comment