ಕರ್ನಾಟಕ

ಪ್ರೇಮಿಗಳನ್ನು ಒಂದು ಮಾಡೋ ಕಾಯಕ…! 800 ಮದುವೆ-200 ಲವ್ ಮ್ಯಾರೇಜ್‌ಗೆ ಈತನೇ ಸಾಕ್ಷಿ!

Pinterest LinkedIn Tumblr

vaivi

ಪ್ರೇಮಿಗಳನ್ನು ಸಮಾಜ ಸೋಡುವ ರೀತಿಯೇ ಬೇರೆ. ಅಂತಹದರಲ್ಲಿ ಅಂತರ್ಜಾತಿಯ ಪ್ರೇಮಿಗಳ ಪಾಡಂತೂ ಹೇಳ ತೀರದು. ಪ್ರೇಮಿಗಳಿಗೆ ಸಹಾಯ ಮಾ‌‌ಡುವವರಿಗಿಂತ ಕಾಟ ಕೊ‌ಡುವವರೇ ಹೆಚ್ಚು. ಆದರೆ ಇಲ್ಲೊಬ್ಬ ರೈತ ಪ್ರೇಮಿಗಳಿಗೆ ಸಹಾಯ ಮಾಡುವುದಕ್ಕಾಗಿಯೇ ಹುಟ್ಟಿದಂತಿದೆ. ಏಕೆಂದರೆ ಅದೆಷ್ಟೋ ಪ್ರೇಮಿಗಳನ್ನು ಇವರು ಒಂದು ಮಾಡಿ ಮದುವೆ ಮಾಡಿಸಿದ್ದಾರೆ.

ಹೌದು, ಇವರ ಹೆಸರು ನಿಂಗಪ್ಪ ಕಾಳೇರ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬಿದರಕೊಪ್ಪದ ನಿವಾಸಿ 62 ವರ್ಷದ ನಿಂಗಪ್ಪ ವೃತ್ತಿಯಲ್ಲಿ ರೈತ. ಆದರೂ ಕೂಡ ಇವರು ಇದುವರೆಗೂ ಸುಮಾರು 800 ಮದುವೆಗಳನ್ನು ಮಾಡಿಸಿದ್ದಾರೆ. ಅಷ್ಟೇ ಅಲ್ಲ ಈ ಪೈಕಿ 200 ಜೋಡಿ ಪ್ರೇಮಿಗಳ ಮದುವೆ ಕೂಡ ಮಾಡಿಸಿದ್ದಾರೆ. ಈ 200 ಜೋಡಿ ಅಂತರ್ಜಾತಿ ವಿವಾಹಗಳಿಗೆ ನಿಂಗಪ್ಪ ಸಾಕ್ಷಿಯಾಗಿದ್ದಾರೆ.

ಹಿಂದೂ-ಮುಸ್ಲಿಂ ಪ್ರೇಮಿಗಳನ್ನು ಒಂದು ಮಾ‌ಡಿದ ನಿಂಗಪ್ಪ

ಪ್ರೇಮಿಗಳ ಮದುವೆಗೆ ಎಂತಹ ಸಮಸ್ಯೆಯೇ ಎದುರಾಗಲಿ ನಿಂಗಪ್ಪ ಪ್ರಕರಣದಲ್ಲಿ ಪ್ರವೇಶಿಸಿದರೆ ಸಾಕು ಸಮಸ್ಯೆ ಬಗೆಹರಿಯಿತು ಅಂತಾನೆ ಅರ್ಥ. ಹಿಂದೂ ಮುಸ್ಲಿಂ ಇದ್ದರೂ ಕೂಡ ಅವರ ಪೋಷಕರ ಮನವೊಲಿಸಿ ಮದುವೆ ಮಾಡುವುದರಲ್ಲಿ ನಿಂಗಪ್ಪ ಎತ್ತಿದ ಕೈ.

ಪ್ರೇಮಿಗಳೆಂದರೆ ಪಂಚಪ್ರಾಣ

ವ್ಯವಸಾಯ ಅವಲಂಬಿಸಿರುವ ನಿಂಗಪ್ಪನಿಗೆ ಪ್ರೇಮಿಗಳೆಂದರೆ ಪಂಚಪ್ರಾಣ. ತನ್ನ ಬಳಿ ಬರುವ ಯಾವುದೇ ಪ್ರೇಮಿಗಳನ್ನು ನಿಂಗಪ್ಪ ಈವರೆಗೆ ಬರಿಗೈಯಲ್ಲಿ ಕಳಿಸಿಲ್ಲ. ಮೊದಲು ಪ್ರೇಮಿಗಳ ಪೋಷಕರ ಜೊತೆ ಮಾತುಕತೆ ನಡೆಸುವ ನಿಂಗಪ್ಪ, ಪೋಷಕರ ಸಮ್ಮತಿ ಪಡೆದೇ ಪ್ರೇಮಿಗಳ ವಿವಾಹ ಮಾಡಿಸುತ್ತಾರೆ. ಒಂದು ವೇಳೆ ಪೋಷಕರು ಒಪ್ಪದಿದ್ದರೆ ತನ್ನ ಮಧ್ಯಸ್ಥಿಕೆಯಲ್ಲಿ ಮದುವೆ ಮಾಡುತ್ತಾರೆ.

ಪ್ರೇಮಿಗಳ ಮದುವೆ ಮಾಡುವುದಷ್ಟೇ ಅಲ್ಲ, ಮದುವೆ ಬಳಿಕವೂ ನಿಂಗಪ್ಪ ಜೋಡಿಗಳ ಮೇಲೆ ಗಮನವಿಟ್ಟಿರುತ್ತಾರೆ. ನಿಂಗಪ್ಪನ ಈ ಕಾರ್ಯ ಜಿಲ್ಲೆಯ ಸಮಾಜ ಸೇವಕರಿಗೆ ಸಂತಸ ತಂದಿದೆ.

Write A Comment