ಬೆಂಗಳೂರು: ನಗರದ ಹೊರವಲಯದ ವೈಟ್‍ಫೀಲ್ಡ್ ಮುಖ್ಯರಸ್ತೆಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆಯಾಗಿದೆ.
25 ವರ್ಷದ ಸೊಹೈಲ್ ಹತ್ಯೆಗೀಡಾದ ರೌಡಿಶೀಟರ್. ನಿನ್ನೆ ಕಾರಿನಲ್ಲಿ ಕೂತಿದ್ದಾಗ ತಡರಾತ್ರಿ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸೊಹೈಲ್ ವಿರುದ್ಧ ಮಡಿವಾಳ, ಬನಶಂಕರಿ, ಕೋರಮಂಗಲದಲ್ಲಿ ಪ್ರಕರಣಗಳು ದಾಖಲಾಗಿದ್ದವು. 2 ಕೊಲೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಹತ್ಯೆ ಸಂಬಂಧ ವೈಟ್‍ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.