ಕರ್ನಾಟಕ

ದುಷ್ಕರ್ಮಿಗಳಿಂದ ಮನೆಗೆ ಬೆಂಕಿ: ತಾಯಿ, ಮಗ ಸಜೀವ ದಹನ

Pinterest LinkedIn Tumblr

Manchinahalli  where Family was Set Fire

ಮಾಗಡಿ(ರಾಮನಗರ): ತಡರಾತ್ರಿ ಮನೆಮಂದಿ ಮಲಗಿದ್ದಾಗ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಪರಿಣಾಮ ತಾಯಿ ಮಗ ಸಜೀವ ದಹನವಾಗಿರುವ ಘಟನೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ನಡೆದಿದೆ.

ಮಂಚನಬೆಲೆ ಗ್ರಾಮದ ವಾಸಿ ಭೋಜೇಗೌಡರ ಪತ್ನಿ ವಿಜಯಲಕ್ಷ್ಮಿ(45) ಮತ್ತು ಪುತ್ರ ಭರತ್(20) ಮೃತಪಟ್ಟ ದುರ್ದೈವಿಗಳು. ಇನ್ನು ಸುಟ್ಟ ಗಾಯಗಳಿಂದ ತೀವ್ರ ಅಸ್ವಸ್ಥಗೊಂಡಿರುವ ಭೋಜೇಗೌಡ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ರಾತ್ರಿ ವಿಜಯಲಕ್ಷ್ಮಿ ಮತ್ತು ಅವರ ಪುತ್ರ ಭರತ್ ಮನೆಯ ಹಾಲ್ ನಲ್ಲಿಯೇ ಮಲಗಿದ್ದರು. ದುಷ್ಕರ್ಮಿಗಳು ತಡರಾತ್ರಿ ಮನೆಯ ಎರಡು ಬಾಗಿಲುಗಳು ತೆರೆಯಲು ಸಾಧ್ಯವಾಗದಂತೆ ಹೊರಗಿನಿಂದ ಚಿಲಕಗಳನ್ನು ದಾರದಿಂದ ಬಿಗಿದ್ದಾರೆ. ಆನಂತರ ಕಿಟಿಕಿಯಿಂದ ಮನೆಯೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹಾಲ್ ನಲ್ಲಿ ದಿವಾನ್ ಮೇಲೆ ಮಲಗಿದ್ದ ಭರತ್ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ಹಾಲ್ ನಲ್ಲಿಯೇ ನೆಲದ ಮೇಲೆ ಮಲಗಿದ್ದ ವಿಜಯಲಕ್ಷ್ಮಿ ಹಾಗೂ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಬೋಜೇಗೌಡರು ಮಗನನ್ನು ರಕ್ಷಿಸಲು ಬಂದಿದ್ದು ಆದರೆ ಪ್ರಯೋಜನವಾಗಲಿಲ್ಲ.

Write A Comment