ಕರ್ನಾಟಕ

ಬಿಡುಗಡೆ ಹಂತಕ್ಕೆ ಬಂದು ನಿಂತ ರೆಡ್

Pinterest LinkedIn Tumblr

chanchala

ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆದಾಗ ಹೆಣ್ಣು, ಹೊನ್ನು, ಮಣ್ಣು ಎಂಬ ಮೂರು ಅಂಶಗಳಲ್ಲಿ ಒಂದು ಮೂಲ ಕಾರಣವಾಗಿರುತ್ತದೆ. ಇಂತಹುದೇ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿದ್ದಪಡಿಸಿದ ಕತೆಗಳ ಆನೇಕ ಚಿತ್ರಗಳು ನಿರ್ಮಾಣಗೊಂಡಿವೆ.

ಪ್ರೀತಿ ಪ್ರೇಮ ವಂಚನೆ ಆಧರಿಸಿದ ಕತೆಯನ್ನು ಒಳಗೊಂಡ ಚಿತ್ರಗಳ ನಡುವೆ ಚಂಚಲ ಮನಸ್ಸಿನ ಹೆಣ್ಣೊಬ್ಬಳ ಕಥೆ ವ್ಯಥೆಯನ್ನು ಒಳಗೊಂಡ ಚಿತ್ರವೊಂದು ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಅದರೆ ಹೆಸರೇ ರೆಡ್ ಚಿತ್ರದ ಶೀರ್ಷಿಕೆಯನ್ನು ಕೇಳಿದ ತಕ್ಷಣ ಇದರಲ್ಲೇನೋ ಕೂತೂಹಲವಿದೆ ಎನಿಸದೇ ಇರಲಾರದು.

ನಿಜ.ರೆಡ್‌ನಲ್ಲಿ ಕೂತೂಹಲವಿದೆ,ಗಂಡ ಹೆಂಡತಿಯ ಸಂಬಂಧದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳು ಸಹಜ. ಆದರೆ, ಅದನ್ನು ಸರಿಪಡಿಸಿಕೊಂಡು ಹೋಗಬೇಕಾದದ್ದು ಇಬ್ಬರ ಕರ್ತವ್ಯವಾಗಿರುತ್ತದೆ. ಆದರೆ ಹೆಣ್ಣು ದಾರಿ ತಪ್ಪಿದರೆ ದೊಡ್ಡ ಅನಾಹುತವೇ ನಡೆದುಹೋಗುತ್ತದೆ. ಆ ಹೆಣ್ಣು ತನ್ನಲ್ಲಿ ಹತ್ತಿಕ್ಕಿಕೊಳ್ಳಲಾಗದ ಮನೋಬಯಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಕೈ ಹಿಡಿದ ಗಂಡನ ಪ್ರಾಣವನ್ನೇ ತೆಗೆಸುವ ಹಂತಕ್ಕೆ ತಲುಪುತ್ತಾಳೆ ಎನ್ನುವ ಅಂಶಗಳು ಚಿತ್ರದಲ್ಲಿ ಒಳಗೊಂಡಿವೆ.

ಷಡ್ಯಂತ್ರ ಹಾಗೂ ‘ಮನಿ ಹನಿ ಶನಿ’ ಎನ್ನುವ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜೇಶ್ ಮೂರ್ತಿ ಅವರು ರೆಡ್‌ಗೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ಮಾಣ, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಸಂಕಲನಕಾರನಾಗಿ ಕೂಡಾ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಬಹುತೇಕ ವಿಭಾಗಗಳಲ್ಲಿ ಕೆಲಸ ಮಾಡಲಿರುವ ರಾಜೇಶ್‌ಮೂರ್ತಿ ಅವರು ರೆಡ್‌ನ್ನು ಅತ್ಯುತ್ತಮ ಚಿತ್ರ ಮಾಡಲು ಎಲ್ಲ ರೀತಿಯಲ್ಲೂ ಪರಿಶ್ರಮಪಟ್ಟಿದ್ದಾರೆ.

ರೆಡ್ ಚಿತ್ರವೂ ವಿಭಿನ್ನ ರೀತಿಯ ಪ್ರಯೋಗವಾಗಿದೆ ದಾರಿತಪ್ಪಿ ನಡೆಯುವ ಅಪರಾಧಗಳನ್ನು ಚಂಚಲ ಮನಸ್ಸಿನಿಂದ ಆಗುವ ಅನಾಹುತಗಳನ್ನು ಚಿತ್ರವು ತೆರೆದಿಡುತ್ತದೆ ಚಿತ್ರಕತೆಗೆ ತಕ್ಕಂತೆ ಚುಂಬನ ದೃಶ್ಯಗಳಿದ್ದರೂ ಎಲ್ಲೂ ಅಶ್ಲೀಲವಾಗಿರದೇ ಮುಜುಗರ ಹುಟ್ಟಿಸುವುದಿಲ್ಲ ಎನ್ನುತ್ತಾರೆ ರಾಜೇಶ್‌ಮೂರ್ತಿ

.ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರು ರೆಡ್ ವೀಕ್ಷಿಸಿ ಪ್ರಶಂಶಿಸಿ ಜೊತೆಗೆ ವಿತರಣೆಯ ಮಾಡುತ್ತಿರುವುದು ಜನಿರ್ದೇಶಕ ರಾಜೇಶ್‌ಮೂರ್ತಿ ಅವರಲ್ಲಿ ಸಂತಸ ಮೂಡಿಸಿದೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದ್ದು ಈ ತಿಂಗಳ ಕೊನೆಯಲ್ಲಿ ಇಲ್ಲವೇ ಅಥವಾ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರೆಡ್ ತೆರೆಗೆ ತರುವ ಸಿದ್ದತೆ ನಡೆದಿದೆ.

Write A Comment