ಕರ್ನಾಟಕ

ಮಂಗಾಟ ಪೂರ್ಣ….

Pinterest LinkedIn Tumblr

Mangata

ಪ್ರೇಯಸಿಯನ್ನು ಖುಷಿಪಡಿಸಲು ಆರು ಮಂದಿ ಯುವಕರು ಆಡುವ ಆಟವೇ ಮಂಗಾಟ.ವ್ಯಾಪಾರ ವಹಿವಾಟು ನಡೆಸಿ ಶ್ರೀಮಂತರಾಗಿ ಪ್ರೇಯಸಿಯನ್ನು ಖುಷಿ ಪಡಿಸಲು ಹೋಗುವ ಯುವಕರಿಗೆ ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಅದಕ್ಕಾಗಿ ಅವರು ಅಡ್ಡದಾರಿಯಲ್ಲಿ ಹೋಗುತ್ತಾರೆ ಮೊದಲಿಗೆ ಸಣ್ಣಪುಟ್ಟ ಕಳ್ಳತನ ಮಾಡಿ ಸುಲಬದಲ್ಲಿ ಹಣ ಗಳಿಸುವ ಅವರು ದಿಢೀರ್ ಶ್ರೀಮಂತರಾಗಲು ದರೋಡೆಗೆ ಯತ್ನಿಸುತ್ತಾರೆ.

ಅದರಲ್ಲಿ ಯಶಸ್ವಿಯಾಗುತ್ತಾರಾ ಇಲ್ಲವೇ ಜೈಲು ಪಾಲಾಗಿ ಕಷ್ಟ ಅನುಭವಿಸುತ್ತಾರಾ ಎನ್ನುವ ಕತೆಯನ್ನು ಕುರಿತಾದ ’ಮಂಗಾಟ’ ಯುವಕರು ದಾರಿ ತಪ್ಪಿ ಕಷ್ಟ ಎದುರಿಸುವುದನ್ನು ತೋರಿಸಿ ಉತ್ತಮ ದಾರಿಯಲ್ಲಿ ಜೀವನ ಸಾಗಿಸಬೇಕೆನ್ನುವುದನ್ನು ಮಂಗಾಟ ಹೇಳಲಿದೆ ಅಂದ ಹಾಗೆ ಮಂಗಾಟ ಚಿತ್ರೀಕರಣ ಮುಗಿದಿದೆ ಬಿಡುಗಡೆಗೆ ಸಿದ್ದವಾಗಿದೆ.

ಮಂಗಾಟ ಪೂರ್ಣಗೊಂಡ ಹಿನ್ನಲೆಯಲ್ಲಿ ನಿರ್ಮಾಪಕ ಸಂಜೀವ್‌ಗವಾಂಡಿ ಅವರು ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭವನ್ನು ವಿಜಯ ರೆಸಿಡೆನ್ಸಿ ಹೊಟೇಲ್‌ನಲ್ಲಿ ಆಯೋಜಿಸಿದ್ದರು.ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡಿರುವ ಅವರು ಚಿತ್ರವೂ ಅತ್ಯುತ್ತಮವಾಗಿ ಮೋಡಿಬಂದಿದೆ ಕತೆಯಲ್ಲಿ ಹೊಸತನವಿದ್ದು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುತ್ತಾರೆ ಅವರು.

ಮಂಗಾಟಕ್ಕೆ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಲೋಹಿತ್‌ರಾಜ್ ದಾರಿತಪ್ಪುವ ಯುವಕರಿಗೆ ಚಿತ್ರದಲ್ಲಿ ಒಳ್ಳೆಯ ಸಂದೇಶ ನೀಡಲಾಗಿದೆ ಅಂದುಕೊಂಡಂತೆ ಚಿತ್ರೀಕರಣ ಮುಗಿಸಿದ್ದೇವೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆಯ ಚಿತ್ರ ನೀಡಲಾಗುತ್ತಿದ್ದು ಮನೆಮಂದಿಗೆಲ್ಲಾ ಇಷ್ಟವಾಗಲಿದೆ ಎನ್ನುತ್ತಾರೆ.

ರಂಗೋಲಿ ಆದಿ, ಅರುಣ್‌ಭರತ್, ವಿಜಯ್, ರಾಘವನಾಯಕ್, ಪ್ರಶಾಂತ್‌ಸಿದ್ದಿ ಉಳಿದ ಕೋತಿಗಳು. ಐಟಂ ಹಾಡಿಗೆ ಹುಡುಗಿಯರ ಮುಂದೆ ಹುಡುಗರು ಕುಣಿಯುತ್ತಾರೆ. ಇದರಲ್ಲಿ ಹುಡುಗರ ಮುಂದೆ ಲಲೆನಯರು ಹೆಜ್ಜೆ ಹಾಕಿರುವುದು ವಿಶೇಷ.

ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿರುವ ಪೂಜಾ ನಾಯಕಿ. ಎನ್‌ಆರ್‌ಐ ಪಾತ್ರದಲ್ಲಿ ಮಮತಾರಾವುತ್ ಅಭಿನಯಿಸಿದ್ದಾರೆ. ಇವರನ್ನು ಹದ್ದುಬಸ್ತಿನಲ್ಲಿಡಲು ರಿಂಗ್‌ಮಾಸ್ಟರ್ ಆಗಿರುವ ಅಚ್ಯುತ್‌ಕುಮಾರ್, ನಾರಾಯಣಸ್ವಾಮಿ ಪೋಲೀಸ್ ಅಧಿಕಾರಿಗಳಾಗಿ ನಟನೆ ಇದೆ. ಕತೆಗೆ ಒಂದು ಹಾಡು ಸೀಮತವಾಗಿರುವುದರಿಂದ ಅರ್ಜುನ್ ರಾಮ್ ಸಂಗೀತ ಸಂಯೋಜಿಸಿದ್ದಾರೆ.

ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಶಿಷ್ಯನ ಚಿತ್ರಕ್ಕೆ ಶುಭಹಾರೈಸಲು ನಿರ್ದೇಶಕ ಆನಂದ್.ಪಿ.ರಾಜು, ಭಾಮಾಹರೀಶ್ ಹಾಜರಿದ್ದರು. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಸಲಾಗಿದೆ.

Write A Comment