ಬೆಂಗಳೂರು: ಸ್ಯಾಂಡಲ್ ವುಡ್ “ಚಾಲೆಂಜಿಂಗ್ ಸ್ಟಾರ್’ ದರ್ಶನ್ ದಂಪತಿ ನಡುವಿನ ಕಲಹ ಪ್ರಕರಣ ಶುಕ್ರವಾರ ಕೂಡ ಮುಂದುವರಿದಿದ್ದು, ದಂಪತಿ ನಡುವಿನ ಪರಸ್ಪರ ವಾಗ್ವಾದ ತಾರಕಕ್ಕೇರಿದೆ.
ಈ ಮಧ್ಯೆ ಪತ್ನಿ ವಿಜಯಲಕ್ಷ್ಮಿ ಮತ್ತು ಬಾಯ್ ಫ್ರೆಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ದರ್ಶನ್ ವಿರುದ್ಧ ಕಿಡಿಕಾರಿರುವ ನಟ ದರ್ಶನ್, ತಮ್ಮ ಮಗುವನ್ನೇ ಡಿಎನ್‌ಎಗೆ ಪರೀಕ್ಷೆಗೊಳಪಡಿಸುವ ಬಗ್ಗೆ ಪತ್ನಿಗೆ ಸವಾಲು ಹಾಕಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ನಟ ದರ್ಶನ್ ಮಗು ತಮಗೆ ಜನಿಸಿದ್ದಲ್ಲ ಎಂದು ನೀಡಿರುವ ಹೇಳಿಕೆ ಪ್ರಕರಣಕ್ಕೆ ತುಪ್ಪ ಸುರಿದಂತಾಗಿದೆ. ಇನ್ನು ದರ್ಶನ್ ಹಾಕಿರುವ ಈ ಸವಾಲಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪತ್ನಿ ವಿಜಯಲಕ್ಷ್ಮಿ “ದರ್ಶನ್ ಹೀಗೆ ಹೇಳುವುದಾದರೆ, ಡಿಎನ್‌ಎ ಪರೀಕ್ಷೆಗೂ ಸಿದ್ಧ’ ಎಂದು ಪ್ರತಿ ಸವಾಲು ಹಾಕಿದ್ದಾರೆ.
“ದರ್ಶನ್ ಯಾಕೆ ಈ ರೀತಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಪತಿ ಅಷ್ಟು ಕೀಳು ಮಟ್ಟದಲ್ಲಿ ಮಾತನಾಡುವುದಿಲ್ಲ. ನಮ್ಮ ಕೌಟುಂಬಿಕ ಸಮಸ್ಯೆಯನ್ನು ಮೂರನೇ ವ್ಯಕ್ತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅನುಮಾನ ವ್ಯಕ್ತಪಡಿಸಿರುವ ಅವರು, “ಹಾಗೊಂದು ವೇಳೆ ಮಾತನಾಡಿದ್ದರೆ, ಮಗನ ಜನನ ಬಗ್ಗೆ ತಿಳಿಯಲು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿ’ ಎಂದು ವಿಜಯಲಕ್ಷ್ಮೀ ಸವಾಲು ಹಾಕಿದ್ದಾರೆ.