ಬೆಂಗಳೂರು: ಪತ್ನಿ ವಿಜಯಲಕ್ಷ್ಮಿ ಮತ್ತು ಸೆಕ್ಯೂರಿ ಗಾರ್ಡ್‍ಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ನಟ ದರ್ಶನ್ ತ್ಯಾಗರಾಜನಗರದಲ್ಲಿರುವ ಎಸಿಪಿ ಕಚೇರಿ ಹಾಜರಾಗಿ ವಿಚಾರಣೆ ಎದುರಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ 10 ಗಂಟೆಯ ವೇಳೆಗೆ ಆಗಮಿಸಿದ ದರ್ಶನ್ ಆರಂಭದಲ್ಲಿ ದೂರು ದಾಖಲಾದ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಗೆ ತೆರಳಬೇಕಿತ್ತು. ಆದರೆ ಭದ್ರತೆ ದೃಷ್ಟಿಯಿಂದ ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಲೋಕೇಶ್ ಅವರು ತ್ಯಾಗರಾಜನಗರದಲ್ಲಿರುವ ಎಸಿಪಿ ಕಚೇರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ದರ್ಶನ್ ಗೆ ಸೂಚಿಸಿದ್ದರು.
12 ಗಂಟೆಯ ವೇಳೆ ಎಸಿಪಿ ಲೋಕೇಶ್ ಅವರ ಮುಂದೆ ದರ್ಶನ್ ಹಾಜರಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ದೇವರಾಜ್ ಮೇಲೆ ಹಲ್ಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡ ದರ್ಶನ್, ಈಗಾಗಲೇ ಸೆಕ್ಯೂರಿಟಿ ಗಾರ್ಡ್ ಬಳಿ ಕ್ಷಮೆ ಕೇಳಿದ್ದೇನೆ ಎಂದು ಹೇಳಿದ್ದಾರೆ.