ಕರ್ನಾಟಕ

ಜಗ್ಗೇಶ್,ಪುನೀತ್‌ಗೆ ಹುಟ್ಟುಹಬ್ಬದ ಸಂಭ್ರಮ…ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ ಪುನೀತ್ ರಾಜ್‌ಕುಮಾರ್

Pinterest LinkedIn Tumblr

punith

ಬೆಂಗಳೂರು: ಕನ್ನಡ ಚಿತ್ರರಂದ ಇಬ್ಬರು ನಟರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹಿರಿಯ ನಟ ಜಗ್ಗೇಶ್ ಅವರಿಗೆ 53ನೇ ಹುಟ್ಟುಹಬ್ಬವಾದರೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ 41 ನೇ ಹುಟ್ಟುಹಬ್ಬ ಸದಾಶಿವನಗರದ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು,ಅಭಿಮಾನಿಗಳ ಸಮ್ಮುಖದಲ್ಲಿ ಪುನೀತ್ ರಾಜ್‌ಕುಮಾರ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ರಾಜ್ಯದ ವಿವಿದೆಡೆಯಿಂದ ರಾತ್ರಿಯಿಂದಲೇ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿದ್ದ ಅಭಿಮಾನಿಗಳು ಪುನೀತ್ ಅವರ ಮುಂಬರುವ ಚಿತ್ರಗಳ ಪೋಸ್ಟರ್ ಹಿಡಿದು ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸುವ ಮೂಲಕ ಶುಭಕೋರಿದರು.

ಅಭಿಮಾನಿಗಳೊಂದಿಗೆ ಹಲವು ರಾಜಕೀಯ ಪಕ್ಷದ ಮುಖಂಡರೂ ಕೂಡ ಪುನೀತ್ ಅವರಿಗೆ ಶುಭಕೋರಿದರು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುನೀತ್,ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ,ರಾಜ್‌ಕುಮಾರ್ ಸಮಾಧಿಗೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು.

ಶುಭ ಹಾರೈಕೆ:
ಇಂದು ಹುಟ್ಟುಹಬ್ಬ ಆಚರಿಸಿಕೊಂಡ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಚಿತ್ರರಂಗದ ಹಲವು ಗಣ್ಯರು ಶುಭ ಕೋರಿ ಇನ್ನೂ ನೂರ್ಕಾಲ ಬಾಳಿ ಹಾಗೆ ಹತ್ತಾರು ಯಶಸ್ವಿ ಚಿತ್ರಗಳನ್ನು ನೀಡಿ ಎಂದು ಹಾರೈಸಿದ್ದಾರೆ.

ಹುಟ್ಟುಹಬ್ಬದ ದಿನದಂದೇ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಚಕ್ರವ್ಯೂಹ ಚಿತ್ರದ ಧ್ವನಿಸುರುಳಿ ಇಂದು ಸಂಜೆ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ.ಈ ಚಿತ್ರವಲ್ಲದೆ ಚಿತ್ರೀಕರಣದ ಹಂತದಲ್ಲಿರುವ “ದೊಡ್ಮನೆ ಹುಡುಗ” ಮತ್ತು “ರಾಜಕುಮಾರ” ಚಿತ್ರಗಳಿವೆ.ಇದಲ್ಲದೆ ಆಹ್ವಾನ ಮತ್ತು ಜೇಮ್ಸ್ ಚಿತ್ರಗಳಿ ಕೈಯಲ್ಲಿದ್ದು ಪುನೀತ್ ರಾಜ್‌ಕುಮಾರ್ ತುಂಬಾ ಬ್ಯುಸಿ ನಟ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ಅವರ ಆಪ್ತ ಮೂಲಗಳ ಪ್ರಕಾರ ೨೦೨೦ರ ವೇಳೆಯವರೆಗೂ ಫುಲ್ ಬುಸಿಯಾಗಿದ್ದಾರೆ. ಇತ್ತ ಜಗ್ಗೇಶ್ ಕೂಡ ತಮ್ಮ ಕುಟುಂಬದ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.

ಅಭಿಮಾನಕ್ಕೆ ಋಣಿಹುಟ್ಟುಹಬ್ಬದ ದಿನವೇ “ಚಕ್ರವ್ಯೂಹ” ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ.ಅಲ್ಲದೆ ಚಿತ್ರಕ್ಕಾಗಿ ಹಾಡು ಹಾಡಿದೆ ತೆಲುಗಿನ ಸೂಪರ್‌ಸ್ಟಾರ್ ನಟ ಜ್ಯೂನಿಯರ್ ಎನ್‌ಟಿಆರ್, ನಟಿ ಕಾಜೋಲ್ ಅಗರ್‌ವಾಲ್ ಮತ್ತು ನಟ ಸುದೀಪ್‌ಗೆ ವೀಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ದಾ ಅವರ ಗೆಳೆತನ ಉಳಿಸಿಕೊಳ್ಳುವೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಕೋರಿದ್ದಾರೆ.”ರಾಜಕುಮಾರ” ಚಿತ್ರ ಆರಂಭವಾಗುತ್ತಿದೆ ಇದಲ್ಲದೆ ಇನ್ನೂ ನಾಲ್ಕಾರು ಚಿತ್ರಗಳಿವೆ. ಅಭಿಮಾನಿಗಳಿಗೆ ಸದಾ ಚರಋಣಿ.
– ಪುನೀತ್ ರಾಜ್‌ಕುಮಾರ್

Write A Comment