ಕರ್ನಾಟಕ

ವಾಷಿಂಗ್ ಮಷಿನ್‌ನಲ್ಲಿ ಸಿಲುಕಿಕೊಂಡ ಬಾಲಕನ ಪರದಾಟ: ಹೊರತೆಗೆಯಲು ಪೋಷಕರ ಪರದಾಟ

Pinterest LinkedIn Tumblr

washing machine

ಕಲಬುರಗಿ: ವಾಷಿಂಗ್ ಮಷಿನ್ ನಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಬಾಲಕನನ್ನು ಅರ್ಧ ಗಂಟೆಯ ನಿರಂತರ ಪ್ರಯತ್ನದ ನಂತರ ರಕ್ಷಿಸಿರುವ ಘಟನೆ ಕಲಬುರಗಿಯ ವಿದ್ಯಾನಗರದಲ್ಲಿ ನಡೆದಿದೆ.

ಬೆಳಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದಾಗ ಆಟವಾಡುತ್ತಿದ್ದ ಮಗು ಟಾಪ್ ಲೋಡಿಂಗ್ ವಾಷಿಂಗ್ ಮಷಿನ್‌ನೊಳಗೆ ಇಳಿದಿದೆ. ಆ ಸಂದರ್ಭದಲ್ಲಿ ಮಷಿನ್ ಚಾಲನೆಯಲ್ಲಿ ಇರಲಿಲ್ಲ. ಮೊಳಕಾಲಿನವರೆಗೆ ಕಾಲು ಸಿಕ್ಕಿಹಾಕಿಕೊಂಡ ಬಳಿಕ ಹೊರಗೆ ಬರಲಾಗದೆ ಅಳಲು ಆರಂಭಿಸಿದೆ. ತಕ್ಷಣವೇ ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ಪ್ರಯತ್ನ ಫಲಿಸದ ಕಾರಣ ಭಯಭೀತರಾದ ತಾಯಿ ರಸ್ತೆಗೆ ಬಂದು ಮಗುವನ್ನು ರಕ್ಷಣೆ ಮಾಡುವಂತೆ ರಸ್ತೆಗೆ ಬಂದು ಚೀರಾಡಿದ್ದಾರೆ. ಬಳಿಕ ಅದೇ ಬಡಾವಣೆಯ ಶಿವರಾಜ ಅಂಡಗಿ ಮತ್ತು ಹಣಮಂತ ರೆಡ್ಡಿ ಕಲ್ಲಬೇನೂರ ಎಂಬುವವರು ನೆರವಿಗೆ ಧಾವಿಸಿದ್ದಾರೆ.

ಸಾಕಷ್ಟು ಪ್ರಯತ್ನಿಸಿದರೂ ಮಗುವಿನ ಕಾಲನ್ನು ಯಂತ್ರದಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅದನ್ನು ಒಡೆದು ಮಗುವಿಗೆ ಯಾವುದೇ ಗಾಯ ಆಗದಂತೆ ಮುತುವರ್ಜಿ ವಹಿಸಿ ಹೊರತೆಗೆಯಲಾಯಿತು.

Write A Comment