ಕರ್ನಾಟಕ

ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಮೃತ ಐಎಎಸ್ ಅಧಿಕಾರಿ ರವಿ ಪೋಷಕರ ಧರಣಿ

Pinterest LinkedIn Tumblr

ravi family

ಬೆಂಗಳೂರು: ಮಗ ಸಾವನ್ನಪ್ಪಿ ವರ್ಷ ಕಳೆದಿದ್ದರೂ ಸರ್ಕಾರದಿಂದ ನಯಾ ಪೈಸೆ ಪರಿಹಾರದ ಹಣ ಬಂದಿಲ್ಲ ಹೀಗಾಗಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಮೃತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ತಂದೆ ತಾಯಿ ನಗರದಲ್ಲಿ ಇಂದೂ ಧರಣಿ ನಡೆಸಿದರು.

ನಗರದ ಆನಂದ್‌ರಾವ್ ಸರ್ಕಲ್ ಬಳಿ ಧರಣಿ ನಡೆಸಿದ ತಂದೆ ತಾಯಿ, ಸರ್ಕಾರದಿಂದ ಒಂದೂ ಬಿಡಿಗಾಸು ಬಂದಿಲ್ಲ. ಮಾಂಗಲ್ಯ ಸರ ಅಡವಿಟ್ಟು ರವಿ ಪುಣ್ಯತಿಥಿ ನೆರವೇರಿಸಲಾಗಿದೆ.ಹೀಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ತಂದೆ ತಾಯಿ ನಡೆಸುತ್ತಿರುವ ಧರಣಿಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಡಿ.ಕೆ ರವಿ ಕುಟುಂಬಕ್ಕೆ ಪರಿಹಾರ ನೀಡುವ ತನಕ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾ ಕಾರರು ಎಚ್ಚರಿಕೆ ನೀಡಿದರು.

Write A Comment