ಕೊಪ್ಪಳ: ಕುಡಿದ ಮತ್ತಿನಲ್ಲಿ ಸ್ಥಳೀಯ ಬಿಜೆಪಿ ಮುಖಂಡನೊಬ್ಬ ನಾಟಕ ಕಂಪೆನಿಯ ಯುವತಿಯ ಜೊತೆ ಐಟಂ ಡ್ಯಾನ್ಸ್ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಲಬುರ್ಗಾ ತಾಲೂಕಿನ ಮುದೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 2 ತಿಂಗಳ ಹಿಂದೇ ಗ್ರಾಮದಲ್ಲಿ ನಾಟಕ ಆಯೋಜನೆ ಮಾಡಲಾಗಿತ್ತು, ಅಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲನಾಗಿರುವ ಕೆ.ಜಿ ಪೆಲ್ಲಾದ ಎಂಬುವನು ನೃತ್ಯಗಾರ್ತಿಯೊಂದಿಗೆ ಐಟಂ ಡ್ಯಾನ್ಸ್ ಮಾಡಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಈತನ ವರ್ತನೆಗೆ ಖಂಡನೆ ವ್ಯಕ್ತವಾಗುತ್ತಿದೆ.