ವಿಶ್ವದಾದ್ಯಂತ ಅನೇಕ ಸುಂದರ ಮತ್ತು ರಮಣೀಯ ಸ್ಥಳಗಳಿವೆ.ಅಲ್ಲಿಯ ಪ್ರಕೃತಿಯ ಸೊಬಗು,ಮೂಲಸೌಕರ್ಯ,ಜನವಸತಿಗೆ ಸಿಗುವ ಸೌಲಭ್ಯಗಳ ಆಧಾರದ ಮೇಲೆ ವಿಶ್ವದ ದುಬಾರಿ ನಗರ ಮತ್ತು ಕಡಿಮೆ ದರದಲ್ಲಿ ವಾಸಿಸಲು ಯೋಗ್ಯ ಎನ್ನುವ ಕುರಿತು ವಿಶ್ವದಾದ್ಯಂತ ಸಮೀಕ್ಷೆ ನಡೆಸಿ ಪಟ್ಟಿ ತಯಾರು ಮಾಡಲಾಗುತ್ತದೆ. ಇದರ ಅನ್ವಯ ಸಿಂಗಪೂರ ಸತತ ಮೂರನೇ ಬಾರಿಗೆ ದುಬಾರಿ ನಗರ ಎನ್ನುವ ಶ್ರೇಯಕ್ಕೆ ಪಾತ್ರವಾಗಿದೆ.ಅದೇ ರೀತಿ ವಿಶ್ವದಲ್ಲಿ ಅತಿ ಕಡಿಮೆ ದರದಲ್ಲಿ ವಾಸಿಸಬಹುದೆಂಬ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಹನ್ನೆರಡು ತಿಂಗಳುಗಳಲ್ಲಿ ಹಣದುಬ್ಬರ,ಸರಕು ಸಾಮಗ್ರಿಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಆಧಾರದ ಮೇಲೆ ವಿಶ್ವದ ೧೩೩ ನಗರಗಳನ್ನು ಸಮೀಕ್ಷೆ ಮಾಡಿದ ಎಕಾನಮಿಸ್ಟ್ ಇಂಟಲಿಜೆನ್ಸ್ ಯುನಿಟ್ ರ್‍ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ.
ಕಳೆದ ಎರಡು ದಶಕಗಳಿಂದ ವಿಶ್ವದ ದುಬಾರಿ ನಗರ ಎನ್ನುವ ಖ್ಯಾತಿಯ ಸ್ಥಾನ ಪಡೆದುಕೊಂಡಿದ್ದ ಜಪಾನ್‌ನ ಟೋಕಿಯೋ ನಗರ ಕಳೆದ ಮೂರು ವರ್ಷಗಳಿಂದ ಆ ಸ್ಥಾನವನ್ನು ಸಿಂಗಪೂರ್‌ಗೆ ಬಿಟ್ಟುಕೊಟ್ಟಿದೆ.ಅರ್ಥಾತ್ ಸಿಂಗಪೂರ್‌ನಲ್ಲಿ ಕಾಸ್ಟ್ ಆಪ್ ಲಿವಿಂಗ್ ದರ ಹೆಚ್ಚಾಗುತ್ತಿದೆ.ಸದ್ಯ ಟೋಕೊಯೋ ೧೧ ಸ್ಥಾನದಲ್ಲಿದೆ.ಬ್ರೆಜಿಲ್ ನ ರಿಯೋ ಡಿ ಜನೇರಿಯಾ ೫೨ ನೇ ಸ್ಥಾನದಿಂದ ೧೧೩ ನೇ ಸ್ಥಾನಕ್ಕೆ ಕುಸಿಯಲ್ಪಟ್ಟಿದೆ.
ನ್ಯೂಜಿಲ್ಯಾಂಡ್‌ನ ಜ್ಯೂರಿಚ್ ಮತ್ತು ಹಾಂಗ್‌ಕಾಂಗ್ ಕ್ರಮವಾಗಿ ಎರಡನೇ ಸ್ಥಾನ ಪಡೆದುಕೊಂಡಿದೆ. ಏಶಿಯನ್ ನಗರಗಳಲ್ಲಿ ಸ್ಥಳಗಳ ಬೆಲೆ ಕಿರಾಣಿ ಸಾಮಗ್ರಿಗಳ ಬೆಲೆ ಹೆಚ್ಚಳ ಸೇರಿದಂತೆ ವಿವಿದ ಕಾರಣಗಳಿಗಾಗಿ ದುಬಾರಿರಿ ನಗರಗಳೆನಿಸಿವೆ.